ಬೆಂಗಳೂರು: ಕಾಫಿ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ಪ್ರತಿನಿತ್ಯ ಒಂದು ಕಪ್ ಕಾಫಿ ಸೇವಿಸದಿದ್ದರೆ ಕೆಲವರಿಗೆ ದಿನವೇ ಆರಂಭವಾಗುವುದಿಲ್ಲ. ಆದರೆ ಕಾಫಿ ಕುಡಿಯುವಾಗ ಬ್ಲ್ಯಾಕ್ ಕಾಫಿ ಸೇವನೆ ಮಾಡಿದರೆ ಮತ್ತಷ್ಟು ಲಾಭವಾಗುತ್ತದೆ.
ಹಾಲು ಹಾಕಿದ ಕಾಫಿ ಕುಡಿಯುವುದಕ್ಕಿಂತ ಬ್ಲ್ಯಾಕ್ ಕಾಫಿ ಕುಡಿದರೆ ಸಾಕಷ್ಟು ಆರೋಗ್ಯಕರ ಪ್ರಯೋಜನಗಳಿವೆ. ಬ್ಲ್ಯಾಕ್ ಕಾಫಿಯಲ್ಲಿ ಉತ್ಕರ್ಷಣಾ ನಿರೋಧಕ ಅಂಶಗಳಿದ್ದು ಈ ಅಂಶ ನಮಗೆ ಕ್ಯಾನ್ಸರ್ ಬರದಂತೆ ತಡೆಗಟ್ಟುವ ಶಕ್ತಿ ಹೊಂದಿದೆಯಂತೆ.
ಬ್ಲ್ಯಾಕ್ ಕಾಫಿ ಸೇವನೆಯಿಂದ ಚಯಾಪಯ ಕ್ರಿಯೆ ಸುಗಮವಾಗುತ್ತದೆ. ಅಲ್ಲದೆ ಬ್ಲ್ಯಾಕ್ ಕಾಫಿ ತೂಕ ಇಳಿಕೆಗೂ ಸಹಕಾರಿ. ಕೆಫೀನ್ ಅಂಶ ಕೊಲೆಸ್ಟ್ರಾಲ್ ಅಂಶವನ್ನು ಕಡಿಮೆ ಮಾಡುವ ಗುಣವನ್ನೂ ಹೊಂದಿದೆ. ಅಲ್ಲದೆ, ಮಧುಮೇಹಿಗಳಂತೂ ಬ್ಲ್ಯಾಕ್ ಕಾಫಿ ಸೇವನೆ ಮಾಡುವುದು ಅತ್ಯಗತ್ಯ. ಇದರಿಂದ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ.
ಸಾಮಾನ್ಯವಾಗಿ ಫಿಟ್ನೆಸ್ ಗೆ ಮಹತ್ವ ಕೊಡುವವರು, ಡಯಟ್ ಮಾಡುವವರು ಬ್ಲ್ಯಾಕ್ ಕಾಫಿ ಸೇವನೆ ಮಾಡಲು ಬಯಸುತ್ತಾರೆ. ಇದರಿಂದ ಅನೇಕ ಆರೋಗ್ಯಕರ ಲಾಭಗಳಿರುವುದರಿಂದ ಬ್ಲ್ಯಾಕ್ ಕಾಫಿಯನ್ನು ನಿಯಮಿತವಾಗಿ ಸೇವಿಸಬಹುದು.