ಬೆಂಗಳೂರು: ಎಳೆನೀರು ಎನ್ನುವುದು ಆರೋಗ್ಯಕ್ಕೆ ಉತ್ತಮ ನೈಸರ್ಗಿಕ ಪಾನೀಯ. ಇದನ್ನು ಕುಡಿಯುವುದು ಹಲವು ರೀತಿಯಲ್ಲಿ ಆರೋಗ್ಯಕ್ಕೆ ಒಳ್ಳೆಯದು.
ಆದರೆ ಎಳೆನೀರು ತಂಪು ಪ್ರಕೃತಿ ಇರುವ ಆಹಾರವಾದ್ದರಿಂದ ಕೆಲವರಿಗೆ ಇದನ್ನು ಸೇವಿಸಲು ಹಿಂಜರಿಯುತ್ತಾರೆ. ಹೀಗಾಗಿ ಕೆಲವು ನಿರ್ದಿಷ್ಟ ಸಮಯದಲ್ಲಿ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು.
ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು. ಉಪವಾಸ ಮಾಡುವವರು, ಡಯಟ್ ಮಾಡುವವರು ಎಳೆನೀರು ಖಾಲಿ ಹೊಟ್ಟೆಯಲ್ಲಿ ಸೇವಿಸುವುದು ಒಳಿತು. ಇದರಿಂದ ಶರೀರಕ್ಕೆ ಶಕ್ತಿ ಸಿಗುತ್ತದೆ.
ದೇಹ ನಿರ್ಜಲೀಕರಣಕ್ಕೊಳಗಾದರೆ ದೇಹಕ್ಕೆ ಶಕ್ತಿ ಒದಗಿಸಲು ಎಳೆ ನೀರು ಸಹಾಯಕ. ಹಾಗಾಗಿ ಜಿಮ್ ಮಾಡಿದ ನಂತರ, ಅಥವಾ ಇನ್ಯಾವುದೇ ವ್ಯಾಯಾಮದ ನಂತರ ಎಳೆನೀರಿನ ಸೇವನೆ ಉತ್ತಮ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ