ಪಾಪ್ ಕಾರ್ನ್ ತಿನ್ನುವುದರ ಈ ಲಾಭ ನಿಮಗೆ ಗೊತ್ತಿತ್ತಾ?

ಮಂಗಳವಾರ, 26 ಸೆಪ್ಟಂಬರ್ 2017 (08:52 IST)
ಬೆಂಗಳೂರು: ಜಾಲಿ ಮೂಡ್ ನಲ್ಲಿ ಸಿನಿಮಾ ನೋಡುವಾಗ ಕೈಯಲ್ಲೊಂದು ಪ್ಯಾಕೆಟ್ ಪಾಪ್ ಕಾರ್ನ್ ಇದ್ದರೆ ಅದರ ಮಜವೇ ಬೇರೆ. ಆದರೆ ಪಾಪ್ ಕಾರ್ನ್ ತಿನ್ನುವದರ ಆರೋಗ್ಯಕರ ಲಾಭಗಳೇನು ನಿಮಗೆ ಗೊತ್ತಾ? ಇಲ್ಲಿದೆ ನೋಡಿ.

 
ಪೋಷಕಾಂಶಗಳು
ಪಾಪ್ ಕಾರ್ನ್ ಎನ್ನುವುದು ಇಡೀ ಧಾನ್ಯ. ಇದರಲ್ಲಿ ಫೈಬರ್ ಅಂಶ ಹೆಚ್ಚು. ಎರಡರಿಂದ ಮೂರು ಕಪ್ ಪಾಪ್ ಕಾರ್ನ್ ತಿನ್ನುವುದರಿಂದ ನಮ್ಮ ದೇಹದಲ್ಲಿ 4 ಗ್ರಾಂನಷ್ಟು ಪ್ರೊಟೀನ್ ಉತ್ಪಾದನೆಯಾಗುತ್ತದಂತೆ!

ಕ್ಯಾಲೊರಿ ಕಡಿಮೆ
ಇದರಲ್ಲಿ ಫೈಬರ್ ಅಂಶ ಹೆಚ್ಚು ಮತ್ತು ಕ್ಯಾಲೊರಿ ಕಡಿಮೆ. ಸಣ್ಣ ಧಾನ್ಯ ಬಿಸಿ ಮಾಡಿದಾಗ ದೊಡ್ಡ ಗಾತ್ರಕ್ಕೆ ಮಾರ್ಪಡುತ್ತವೆ. ಇದರಲ್ಲಿ ಗಾಳಿಯೇ ಹೆಚ್ಚು. ಮೂರು ಕಪ್ ಪಾಪ್ ಕಾರ್ನ್ ತಿಂದರೆ ನಿಮ್ಮ ದೇಹಕ್ಕೆ ಸಿಗುವುದು ಕೇವಲ 100 ಕ್ಯಾಲೊರಿ.

ದೇಹ ತೂಕ ಇಳಿಕೆಗೆ
ದೇಹ ತೂಕ ಇಳಿಸಲು ಬಯಸುವವರು ಕುರುಕಲು ತಿಂಡಿ ತಿನ್ನಬಾರದು ಎಂದು ಬೇಸರದಲ್ಲಿದ್ದರೆ ಪಾಪ್ ಕಾರ್ನ್ ತಿನ್ನಬಹುದು. ಇದು ದೇಹ ತೂಕ ಇಳಿಸಲು ಸಹಾಯ ಮಾಡುತ್ತದೆ. ಇದು ಹಸಿವು ಇಂಗಿಸುವುದರಿಂದ ಅಗತ್ಯಕ್ಕಿಂತ ಹೆಚ್ಚು ಆಹಾರ ಸೇವನೆ ಮಾಡದಂತೆ ತಡೆಯುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ