ಕಣ್ಣಿನ ದೃಷ್ಟಿ ಕಾಪಾಡಿಕೊಳ್ಳಲು ಈ ಆಹಾರ ಸೇವಿಸಿ

ಬುಧವಾರ, 27 ಸೆಪ್ಟಂಬರ್ 2017 (06:52 IST)
ಬೆಂಗಳೂರು: ಕಣ್ಣು ಎಲ್ಲರಿಗೂ ಬಹು ಅಮೂಲ್ಯ ಅಂಗ. ನಮಗೆ ಜಗತ್ತನ್ನೇ ತೋರಿಸುವ ಅಂಗ. ಅದನ್ನು ಅಷ್ಟೇ ಎಚ್ಚರಿಕೆಯಿಂದ ಕಾಪಾಡುವುದು ಮುಖ್ಯ. ಕಣ್ಣನ್ನು ಸುರಕ್ಷಿತವಾಗಿ ಕಾಪಾಡಿಕೊಳ್ಳಲು ಏನು ಮಾಡಬೇಕು?

 
ಕ್ಯಾರೆಟ್
ಕ್ಯಾರೆಟ್, ಪಪ್ಪಾಯದಂತಹ ಕೆರೊಟಿನ್ ಅಂಶವಿರುವ ಆಹಾರವನ್ನು ಹೆಚ್ಚು ಸೇವಿಸಬೇಕು. ಇದರಲ್ಲಿರುವ ಬೀಟಾ ಕ್ಯಾರೊಟಿನ್ ಎಂಬುದು ವಿಟಮಿನ್ ಎ ವಿಭಾಗಕ್ಕೆ ಸೇರುತ್ತದೆ. ಇದು ಕಣ್ಣಿಗೆ ಎಲ್ಲಾ ರೀತಿಯಿಂದಲೂ ಒಳ್ಳೆಯದು.

ಸೊಪ್ಪು ತರಕಾರಿ
ಪ್ರತಿನಿತ್ಯ ನಿಯಮಿತವಾಗಿ ಸೊಪ್ಪು ತರಕಾರಿಗಳನ್ನು ತಿನ್ನುವುದು ಒಳ್ಳೆಯದು. ಇದರಲ್ಲಿರುವ ಆಂಟಿ ಆಕ್ಸಿಡೆಂಟ್ ಅಂಶಗಳು ಕಣ್ಣಿಗೆ ಬರುವ ಆರೋಗ್ಯ ಸಮಸ್ಯೆಗಳನ್ನು ದೂರ ಮಾಡುತ್ತವೆ.

ಮೊಟ್ಟೆ
ಮೊಟ್ಟೆಯಲ್ಲಿರುವ ಜಿಂಕ್, ಆಂಟಿ ಆಕ್ಸಿಡೆಂಟ್ ಅಂಶಗಳು ನಿಮ್ಮ ದೃಷ್ಟಿ ಹಲವು ಸಮಯದವರೆಗೆ ಚೆನ್ನಾಗಿರುವಂತೆ ನೋಡಿಕೊಳ್ಳುತ್ತದೆ.

ಬಾದಾಮಿ
ಬಾದಾಮಿಯಲ್ಲಿ ವಿಟಮಿನ್ ಅಂಶ ಹೆಚ್ಚಾಗಿದ್ದು, ಇದು ಕಣ್ಣಿನ ದೃಷ್ಟಿ ಸುಧಾರಿಸುವುದಕ್ಕೆ ಒಳ್ಳೆಯದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ