ಸ್ತನಗಳಲ್ಲಿ ನೋವು ಕಾಣಿಸಿಕೊಳ್ಳಲು ಕಾರಣವೇನು ಗೊತ್ತಾ...?

ಮಂಗಳವಾರ, 2 ಜನವರಿ 2018 (11:22 IST)
ಬೆಂಗಳೂರು : ಸಾಮಾನ್ಯವಾಗಿ ಸ್ತನಗಳಲ್ಲಿ ನೋವು ಕಾಣಿಸಿಕೊಳ್ಳಲು ಹಲವಾರು ಕಾರಣಗಳಿವೆ. ಸ್ತನಗಳ ನೋವು ಮುಟ್ಟಿನ ದಿನ ಹತ್ತಿರವಾಗುತ್ತಿದೆ ಎಂಬ ಸೂಚನೆಯಾಗಿರುತ್ತದೆ. ಇದು ಮುಟ್ಟಾಗುವ ಮೊದಲು  ತುಂಬಾ ನೋವಿದ್ದು, ಆಮೇಲೆ ಕ್ರಮೇಣ ಕಡಿಮೆಯಾಗುತ್ತದೆ. ಈ ನೋವು ಒಂದು ಅಥವಾ ಎರಡೂ ಸ್ತನಗಳಲ್ಲಿ ಕಾಣಿಸಿಕೊಳ್ಳಬಹುದು. ಈ ಸ್ತನದ ಮೇಲ್ಭಾಗ ಅಥವಾ ಒಂದು ಭಾಗದಲ್ಲಿ ಮಾತ್ರ ಕಾಣಿಸಿಕೊಂಡು ಕಂಕುಳವರೆಗೆ ಹಬ್ಬಬಹುದು.



ಮುಖ್ಯವಾಗಿ ಮುಟ್ಟಾಗುವ ಮೊದಲು ಸ್ತನಗಳಲ್ಲಿ ನೋವು ಕಾಣಿಸಿಕೊಳ್ಳಲು ಕಾರಣವೇನೆಂದರೆ ಈಸ್ಟ್ರೋಜನ್  ಮತ್ತು ಪ್ರೊಜೆಸ್ಟೋರೆನ್ ಎಂಬ ಹಾರ್ಮೋನ ಗಳು ಮುಟ್ಟಿಗೆ ಕಾರಣವಾಗುತ್ತವೆ. ಈ ಹಾರ್ಮೋನುಗಳು ಮುಟ್ಟಿನ ಸಮಯದಲ್ಲಿ  ಸ್ತನದ ನಾಳಗಳನ್ನು ಹಾಗು ಸ್ತನದ ಲೋಬುಲ್ (ಹಾಲಿನ ಗ್ರಂಥಿ)ಗಳನ್ನು ದೊಡ್ಡದು ಮಾಡುತ್ತವೆ. ಹೀಗೆ ದೊಡ್ಡದಾಗುವಿಕೆಯು ನೋವಿಗೆ ಕಾರಣವಾಗುತ್ತದೆ.

 
ಒತ್ತಡವು ಕೂಡ ಹಾರ್ಮೋನ್ ಗಳ ಏರಿಪೇರಿಗೆ ಕಾರಣವಾಗಿ ಸ್ತನಗಳಲ್ಲಿ ನೋವನ್ನುಂಟು ಮಾಡುತ್ತದೆ. ವಿಪರೀತವಾಗಿ ಕಾಫಿ, ಟೀ, ಕೋಲಾ, ಚಾಕಲೇಟ್ ಮತ್ತು ಶಕ್ತಿ ಪಾನೀಯಗಳ ನ್ನು ಸೇವನೆಮಾಡುವುದರಿಂದ ಸ್ತನಗಳ ನೋವು ಕಾಣಿಸಿಕೊಳ್ಳುತ್ತದೆ. ಆದ್ದರಿಂದ ಇವುಗಳನ್ನು ಹೆಚ್ಚು ಸೇವಿಸಬಾರದು. ತೂಕ ಹೆಚ್ಚಾಗುವಿಕೆಯಿಂದ ಸ್ತನಗಳ ಭಾರ ಹೆಚ್ಚಾಗಿ ನೋವು ಕಾಣಿಸಿಕೊಳ್ಳುತ್ತದೆ. ಸ್ತನಗಳಿಗೆ ಸರಿಯಾಗಿ ಹೊಂದದ ಬ್ರಾಗಳನ್ನು ಧರಿಸುವುದರಿಂದಲೂ ನೋವು ಕಾಣಿಸಿಕೊಳ್ಳುತ್ತದೆ. ಆದ್ದರಿಂದ ಸರಿಯಾಗಿ ಹೊಂದುವಂತಹ ಬ್ರಾಗಳನ್ನು ಧರಿಸಿ. ಅತಿಯಾದ ಭಾರವನ್ನು ಎತ್ತುವುದರಿಂದಲೂ ಕೂಡ ಎದೆಯ ಸ್ನಾಯುಗಳಿಗೆ ಆಯಾಸವಾಗಿ ಇದರಿಂದ ಸ್ತನಗಳಲ್ಲಿ ನೋವು ಕಂಡುಬರುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ