ಪುರುಷರು ಕುಳಿತು ಮೂತ್ರ ವಿಸರ್ಜನೆ ಮಾಡುವುದು ಒಳ್ಳೆಯದು ಯಾಕೆ ಗೊತ್ತಾ...?
ಬುಧವಾರ, 3 ಜನವರಿ 2018 (07:46 IST)
ಬೆಂಗಳೂರು : ಮೂತ್ರ ನಮ್ಮ ದೇಹದಲ್ಲಿ ಚಲಿಸುವ ರಕ್ತದಲ್ಲಿರುವ ಕೆಲವು ವ್ಯರ್ಥ ಪದಾರ್ಥಗಳ ಮಿಶ್ರಣ .ಈ ವ್ಯರ್ಥ ಪದಾರ್ಥಗಳನ್ನು(ಮೂತ್ರ) ಕಿಡ್ನಿಗಳು ರಕ್ತದಿಂದ ಸೋಸಿ ಮೂತ್ರಾಶಯಕ್ಕೆ ತಲುಪಿಸುತ್ತದೆ. ಮೂತ್ರಾಶಯ ತುಂಬಿದ ತಕ್ಷಣ ಮೆದುಳಿಗೆ ಮೂತ್ರವಿಸರ್ಜನೆ ಮಾಡಬೇಕು ಎಂಬ ಸಂದೇಶವನ್ನು ಬರುತ್ತದೆ. ಆಗ ನಾವು ಮೂತ್ರ ವಿಸರ್ಜಿಸುತ್ತೇವೆ.
ಮೂತ್ರ ವಿಸರ್ಜನೆಗೆ ಸಂಬಂಧಿಸಿದಂತೆ ಮಹಿಳೆಯರು ಕುಳಿತು ಮಾಡಿದರೆ ಪುರುಷರು ನಿಂತು ಮಾಡುತ್ತಾರೆ. ಕೆಲವರು ಮಾತ್ರ ಕುಳಿತು ಮೂತ್ರ ಮಾಡುತ್ತಾರೆ. ಅದರೆ ನಿಂತು ಮೂತ್ರ ವಿಸರ್ಜನೆ ಮಾಡುವುದು ಒಳ್ಳೆಯದಲ್ಲ. ಕುಳಿತು ಮಾಡಿದರೆ ತುಂಬಾ ಒಳ್ಳೆಯದು. ಕುಳಿತು ಮೂತ್ರ ವಿಸರ್ಜನೆ ಮಾಡುವವರು ತುಂಬಾ ಆರೋಗ್ಯಕರವಾದ ಜೀವನ ನಡೆಸುತ್ತಾರಂತೆ. ಅವರಿಗೆ ಮೂತ್ರಕೋಶಕ್ಕೆ ಸಂಬಂಧಿಸಿದ ಸಮಸ್ಯೆ ಬರುವುದಿಲ್ಲವಂತೆ. ನಮ್ಮ ಹಿರಿಯರು ಕೂಡ ಕುಳಿತೆ ಮೂತ್ರ ಮಾಡುತ್ತಿದ್ದಾರಂತೆ.
ಕುಳಿತು ಮೂತ್ರ ವಿಸರ್ಜನೆ ಮಾಡುವುದರಿಂದ ಆಗುವ ಒಳಿತೇನು ಎಂದು ಮೊದಲು ತಿಳಿಯೋಣ. ಮೊದಲನೇಯದಾಗಿ ಮೂತ್ರದಲ್ಲಿ ಇರುವುದು ವ್ಯರ್ಥ ಪದಾರ್ಥಗಳು. ಆದರೆ ವ್ಯಾಧಿಗ್ರಸ್ತರ ಮೂತ್ರದಲ್ಲಿ ಕೆಲವೊಮ್ಮೆ ಬ್ಯಾಕ್ಟೀರಿಯಾಗಳು ಇರುತ್ತದೆ. ಇದರಿಂದ ಅವರು ನಿಂತು ಮೂತ್ರ ಮಾಡಿದರೆ ಬ್ಯಾಕ್ಟೀರಿಯಾಗಳು ಹರಡಿಕೊಳ್ಳುತ್ತದೆ. ನಂತರ ಇದು ಬೇರೆಯವರ ಶರೀರದೊಳಗೆ ಪ್ರವೇಶಿಸುತ್ತದೆ. ಆದ್ದರಿಂದ ಕುಳಿತು ಮೂತ್ರ ವಿಸರ್ಜನೆ ಮಾಡಿದರೆ ಬ್ಯಾಕ್ಟೀರಿಯಾಗಳು ಒಂದೇಕಡೆ ಇರುತ್ತದೆ.
ಎರಡನೇಯದಾಗಿ ಕುಳಿತು ಮೂತ್ರ ವಿಸರ್ಜಿಸುವುದರಿಂದ ಶರೀರಕ್ಕೆ ಶುಭ್ರತೆಯನ್ನು ನೀಡಿದಂತಾಗುತ್ತದೆ.
ಮೂರನೇಯದಾಗಿ ಮೂತ್ರಾಶಯ ಹಾಗು ಲೈಂಗಿಕ ಸಮಸ್ಯೆಯುಳ್ಳವರು ಕುಳಿತು ಮೂತ್ರ ವಿಸರ್ಜಿಸಿದರೆ ಅ ಸಮಸ್ಯೆ ಕಡಿಮೆಯಾಗುವ ಅವಕಾಶಗಳು ಹೆಚ್ಚಾಗಿರುತ್ತದೆ. ನಾಲ್ಕನೇಯದಾಗಿ ಕುಳಿತು ಮೂತ್ರ ವಿಸರ್ಜಿಸುವುದರಿಂದ ಮೂತ್ರಾಶಯದಿಂದ ಮೂತ್ರ ಸಂಪೂರ್ಣವಾಗಿ ಹೊರಹೋಗಿ ಮೂತ್ರ ಪಿಂಡದಲ್ಲಿ ಕಲ್ಲುಗಳು ಹಾಗು ಮೂತ್ರಾಶಯದ ಸಮಸ್ಯೆಗಳಿರುವವರಿಗೆ ಒಳ್ಳೆದಾಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ