ಹಣ್ಣು ಸೇವಿಸಿದ ಬಳಿಕ ನೀರು ಕುಡಿಯಬಾರದು ಯಾಕೆ ಗೊತ್ತಾ?

ಶನಿವಾರ, 3 ನವೆಂಬರ್ 2018 (09:20 IST)
ಬೆಂಗಳೂರು: ಹಣ್ಣು ಸೇವನೆ ಆರೋಗ್ಯಕ್ಕೆ ಒಳ್ಳೆಯದು. ಆದರೆ ಹಣ್ಣು ಸೇವಿಸಿದ ಮೇಲೆ ನೀರು ಕುಡಿಯಬಾರದು ಎನ್ನುತ್ತಾರೆ. ಅದು ಯಾಕೆ ಗೊತ್ತಾ?

ಪ್ರತಿ ನಿತ್ಯ ಹಣ್ಣು ಸೇವಿಸುವುದು ಒಳ್ಳೆಯದು ಎಂದು ವೈದ್ಯರೇ ಸಲಹೆ ಕೊಡುತ್ತಾರೆ. ಹಣ್ಣಿನಲ್ಲಿರುವ ಹೇರಳ ಪೋಷಕಾಂಶಗಳು ನಮ್ಮ ದೇಹವನ್ನು ಹಲವು ಆರೋಗ್ಯ ಸಮಸ್ಯೆಯಿಂದ ದೂರ ಮಾಡುತ್ತದೆ ಎನ್ನುವುದು ನಿಜ.

ಆದರೆ ಹಣ್ಣು ಸೇವಿಸಿದ ತಕ್ಷಣವೇ ನೀರು ಕುಡಿಯಬಾರದು. ಯಾಕೆಂದರೆ ಹಣ್ಣಿನಲ್ಲಿ ಸಾಕಷ್ಟು ಸಿಹಿ ಅಂಶವಿರುತ್ತದೆ. ಇದನ್ನು ಜೀರ್ಣಿಸಲು ನಮ್ಮ ದೇಹ ಅಗತ್ಯಕ್ಕೆ ಬೇಕಾದಷ್ಟು ನೀರಿನಂಶ ಬಿಡುಗಡೆ ಮಾಡುತ್ತದೆ. ಅದರ ಮೇಲೆ ನಾವು ನೀರು ಸೇವಿಸಿದಲ್ಲಿ ಅಜೀರ್ಣವಾಗುವ ಸಾಧ್ಯತೆ ಹೆಚ್ಚು. ಅಷ್ಟೇ ಅಲ್ಲ, ಜೀರ್ಣಕ್ರಿಯೆಗೂ ತೊಂದರೆಯಾಗುತ್ತದೆ. ಇದೇ ಕಾರಣಕ್ಕೆ ಹಣ್ಣು ಸೇವಿಸಿದ ತಕ್ಷಣವೇ ನೀರು ಕುಡಿಯಬಾರದು ಎನ್ನುತ್ತಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ