ಕೆಟ್ಟ ಕನಸು ಬೀಳುವುದಕ್ಕೆ ಕಾರಣವೇನು? ಅದರಿಂದ ಹೊರಬರುವುದು ಹೇಗೆ ಗೊತ್ತಾ?
ಬುಧವಾರ, 10 ಜನವರಿ 2018 (08:42 IST)
ಬೆಂಗಳೂರು: ರಾತ್ರಿ ಮಲಗುವಾಗ ಸ್ವೀಟ್ ಡ್ರೀಮ್ಸ್ ಎಂದು ಶುಭ ಹಾರೈಸುತ್ತೇವೆ. ಆದರೆ ಪ್ರತೀ ರಾತ್ರಿಯೂ ಸಿಹಿಗನಸು ಬೀಳಲ್ಲ. ಕೆಟ್ಟ ಕನಸುಗಳು ಬಂದು ಕಂಗೆಡಿಸುವುದಕ್ಕೆ ಕಾರಣವೇನು? ಆ ಭಯಾನಕ ಅನುಭವದಿಂದ ಹೊರಬರುವುದು ಹೇಗೆ?
ಒತ್ತಡ
ಮುಖ್ಯವಾಗಿ ಮಾನಸಿಕ ಒತ್ತಡ ಕೆಟ್ಟ ಕನಸಿಗೆ ಕಾರಣ. ಹಾಗಾಗಿ ಮಲಗುವ ಮುನ್ನ ಆದಷ್ಟು ಒತ್ತಡಗಳಿಂದ ಹೊರ ಬಂದು ರಿಲ್ಯಾಕ್ಸ್ ಆಗ ಮಲಗಿ. ಚಿಂತೆಯ ಮನದಲ್ಲಿ ಮಲಗಿದರೆ, ಬೇಡದ ಆಲೋಚನೆಗಳನ್ನು ಮನದಲ್ಲಿ ತುಂಬಿಕೊಂಡು ನಿದ್ರಿಸಬೇಡಿ.
ನಿದ್ರಾಭಂಗಿ
ಕೆಲವೊಮ್ಮೆ ನಿಮ್ಮ ನಿದ್ರಾ ಭಂಗಿಯೂ ಕೆಟ್ಟ ಕನಸಿಗೆ ಕಾರಣವಾಗಬಹುದು. ಸರಿಯಾದ ಭಂಗಿಯಲ್ಲಿ ಮಲಗದೆ ಅರೆ ಬರೆ ನಿದ್ರೆಯಾದಾಗ ಕೆಟ್ಟ ಕನಸುಗಳು ಬೀಳಬಹುದು.
ಮೊಬೈಲ್ ಲೈಟ್
ಇದು ಇಂದಿನವರಿಗೆ ಎಲ್ಲರಿಗೂ ಇರುವ ಕೆಟ್ಟ ಅಭ್ಯಾಸ. ಮಲಗುವ ಮುಂಚೆ ಮೊಬೈಲ್ ಬ್ರೌಸ್ ಮಾಡುತ್ತಾ ಕೂರುವುದು ಕಣ್ಣಿಗೂ ಒಳ್ಳೆಯದಲ್ಲ. ಹಾಗೆಯೇ ಮೊಬೈಲ್ ನಿಂದ ಹೊರ ಸೂಸುವ ಲೈಟ್ ಕೆಟ್ಟ ಕನಸು ಬೀಳುವುದಕ್ಕೆ ಕಾರಣವಾಗುತ್ತದೆ.
ಕನಸು ಹಂಚಿಕೊಳ್ಳಿ
ಕೆಟ್ಟ ಕನಸು ಬಿದ್ದಾಗ ಅದರಿಂದ ಹೊರಬರಲು ಕಷ್ಟವಾದರೆ ಒಬ್ಬರೇ ಕೂತು ಕನವರಿಸಬೇಡಿ. ಆಪ್ತರ ಬಳಿ ಹಂಚಿಕೊಳ್ಳಿ. ಆಗ ನಿಮಗೂ ಮನಸ್ಸು ಹಗುರವಾಗುತ್ತದೆ.
ಕನಸಲ್ಲೇ ಪರಿಹಾರ ಕಂಡುಕೊಳ್ಳಿ!
ಉದಾಹರಣೆಗೆ ದೊಡ್ಡ ಪ್ರಪಾತಕ್ಕೆ ಬೀಳುವ ಕನಸು ಕಂಡರೆ ಕನಸಿನಿಂದ ಹೊರ ಬಂದ ತಕ್ಷಣ ಸ್ವಲ್ಪ ಹೊತ್ತು ಕಣ್ಣು ಮುಚ್ಚಿಕೊಂಡು ಪ್ರಪಾತದಿಂದ ಹೊರಬರಲು ಪ್ಯಾರಾಚ್ಯೂಟ್ ಹಾಕಿಕೊಂಡಂತೆ ಅಂದುಕೊಳ್ಳಿ. ಅದೇ ರೀತಿ ಕೆಟ್ಟ ಕನಸಿಗೆ ಪರಿಹಾರವನ್ನೂ ತಕ್ಷಣವೇ ಕಲ್ಪಿಸಿಕೊಳ್ಳಿ. ಇದರಿಂದ ಸಮಾಧಾನ ಸಿಗುವುದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿಬೆಂಗಳೂರು: ರಾತ್ರಿ ಮಲಗುವಾಗ ಸ್ವೀಟ್ ಡ್ರೀಮ್ಸ್ ಎಂದು ಶುಭ ಹಾರೈಸುತ್ತೇವೆ. ಆದರೆ ಪ್ರತೀ ರಾತ್ರಿಯೂ ಸಿಹಿಗನಸು ಬೀಳಲ್ಲ. ಕೆಟ್ಟ ಕನಸುಗಳು ಬಂದು ಕಂಗೆಡಿಸುವುದಕ್ಕೆ ಕಾರಣವೇನು? ಆ ಭಯಾನಕ ಅನುಭವದಿಂದ ಹೊರಬರುವುದು ಹೇಗೆ?
ಒತ್ತಡ
ಮುಖ್ಯವಾಗಿ ಮಾನಸಿಕ ಒತ್ತಡ ಕೆಟ್ಟ ಕನಸಿಗೆ ಕಾರಣ. ಹಾಗಾಗಿ ಮಲಗುವ ಮುನ್ನ ಆದಷ್ಟು ಒತ್ತಡಗಳಿಂದ ಹೊರ ಬಂದು ರಿಲ್ಯಾಕ್ಸ್ ಆಗ ಮಲಗಿ. ಚಿಂತೆಯ ಮನದಲ್ಲಿ ಮಲಗಿದರೆ, ಬೇಡದ ಆಲೋಚನೆಗಳನ್ನು ಮನದಲ್ಲಿ ತುಂಬಿಕೊಂಡು ನಿದ್ರಿಸಬೇಡಿ.
ನಿದ್ರಾಭಂಗಿ
ಕೆಲವೊಮ್ಮೆ ನಿಮ್ಮ ನಿದ್ರಾ ಭಂಗಿಯೂ ಕೆಟ್ಟ ಕನಸಿಗೆ ಕಾರಣವಾಗಬಹುದು. ಸರಿಯಾದ ಭಂಗಿಯಲ್ಲಿ ಮಲಗದೆ ಅರೆ ಬರೆ ನಿದ್ರೆಯಾದಾಗ ಕೆಟ್ಟ ಕನಸುಗಳು ಬೀಳಬಹುದು.
ಮೊಬೈಲ್ ಲೈಟ್
ಇದು ಇಂದಿನವರಿಗೆ ಎಲ್ಲರಿಗೂ ಇರುವ ಕೆಟ್ಟ ಅಭ್ಯಾಸ. ಮಲಗುವ ಮುಂಚೆ ಮೊಬೈಲ್ ಬ್ರೌಸ್ ಮಾಡುತ್ತಾ ಕೂರುವುದು ಕಣ್ಣಿಗೂ ಒಳ್ಳೆಯದಲ್ಲ. ಹಾಗೆಯೇ ಮೊಬೈಲ್ ನಿಂದ ಹೊರ ಸೂಸುವ ಲೈಟ್ ಕೆಟ್ಟ ಕನಸು ಬೀಳುವುದಕ್ಕೆ ಕಾರಣವಾಗುತ್ತದೆ.
ಕನಸು ಹಂಚಿಕೊಳ್ಳಿ
ಕೆಟ್ಟ ಕನಸು ಬಿದ್ದಾಗ ಅದರಿಂದ ಹೊರಬರಲು ಕಷ್ಟವಾದರೆ ಒಬ್ಬರೇ ಕೂತು ಕನವರಿಸಬೇಡಿ. ಆಪ್ತರ ಬಳಿ ಹಂಚಿಕೊಳ್ಳಿ. ಆಗ ನಿಮಗೂ ಮನಸ್ಸು ಹಗುರವಾಗುತ್ತದೆ.
ಕನಸಲ್ಲೇ ಪರಿಹಾರ ಕಂಡುಕೊಳ್ಳಿ!
ಉದಾಹರಣೆಗೆ ದೊಡ್ಡ ಪ್ರಪಾತಕ್ಕೆ ಬೀಳುವ ಕನಸು ಕಂಡರೆ ಕನಸಿನಿಂದ ಹೊರ ಬಂದ ತಕ್ಷಣ ಸ್ವಲ್ಪ ಹೊತ್ತು ಕಣ್ಣು ಮುಚ್ಚಿಕೊಂಡು ಪ್ರಪಾತದಿಂದ ಹೊರಬರಲು ಪ್ಯಾರಾಚ್ಯೂಟ್ ಹಾಕಿಕೊಂಡಂತೆ ಅಂದುಕೊಳ್ಳಿ. ಅದೇ ರೀತಿ ಕೆಟ್ಟ ಕನಸಿಗೆ ಪರಿಹಾರವನ್ನೂ ತಕ್ಷಣವೇ ಕಲ್ಪಿಸಿಕೊಳ್ಳಿ. ಇದರಿಂದ ಸಮಾಧಾನ ಸಿಗುವುದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ