ಪ್ರಶ್ನೆ: ನನ್ನ ವಯಸ್ಸು 28 ಮತ್ತು ಅವಳ ವಯಸ್ಸು 30. ನೋಡೋಕೆ ತುಂಬಾ ಚೆನ್ನಾಗಿದ್ದಾಳೆ. ಒಂದೇ ಏರಿಯಾದಲ್ಲಿ ಇರೋದ್ರಿಂದ ಮೊದಲಿನಿಂದಲೂ ತುಸು ಸಲುಗೆ ಇತ್ತು. ಆದರೆ ಕಳೆದ ವರ್ಷ ಆಕೆಯ ಗಂಡ ಅಪಘಾತದಲ್ಲಿ ಕೈ ಕಾಲು ಮುರಿದುಕೊಂಡಿದ್ದಾನೆ. ಆಕೆ ಸಹಜವಾಗಿಯೇ ದುಃಖದಲ್ಲಿದ್ದಳು.
ಆದರೆ ಅವಳ ಕಚೇರಿ ಕೆಲಸ, ಬ್ಯಾಂಕ್, ಮಾರ್ಕೆಟ್ ಹೀಗೆ ಮೊದಲಾದ ಕೆಲಸಗಳಿಗೆ ನನ್ನನ್ನು ಜತೆಯಾಗಿ ಕರೆದುಕೊಂಡು ಹೋಗುತ್ತಿದ್ದಳು. ಹೊರಗಡೆ ಹೋಗುವಾಗ ಕೈಗೆ ಕೈ ತಗಲುವುದು, ಮೈಗೆ ಮೈಗೆ ತಗಲುವುದು ನಡೆಯಿತು. ಅದಾದ ಬಳಿಕ ನಾನು ನನಗೆ ಅರಿವಿಲ್ಲದಂತೆ ಆಕೆಯ ಕಡೆಗೆ ಆಕರ್ಷಿತನಾದೆ. ಒಂದು ದಿನ ಯಾರೂ ಇಲ್ಲದ ಸಮಯದಲ್ಲಿ ಬರಸೆಳೆದು ತಬ್ಬಿಕೊಂಡೆ.
ಬಿಟ್ಟುಬಿಡದಂತೆ ಮುದ್ದಾಡಿದೆ. ಮೊದಲಿಗೆ ಕೊಸರಿದಳಾದರೂ ಆ ಬಳಿಕ ಆಕೆಯೂ ಸಹಕರಿಸಿದಳು. ಹೀಗಾಗಿ ನಮ್ಮ ನಡುವೆ ಹಲವು ಬಾರಿ ಸಮಾಗಮ ನಡೆದಿದೆ. ಅವಳನ್ನು ಬಿಡಲು ಮನಸ್ಸಾಗುತ್ತಿಲ್ಲ. ಮುಂದೇನು ಮಾಡಲಿ?
ಉತ್ತರ: ನಿಮ್ಮ ಹರೆಯದ ಆಕರ್ಷಣೆ ಹಾಗೂ ಆಕೆಗೆ ಗಂಡ ಅಪಘಾತದಲ್ಲಿ ಗಾಯಗೊಂಡ ಬಳಿಕ ತನ್ನ ಕಾಮ ಇಚ್ಛೆಯನ್ನು ಆಕೆ ನಿಮ್ಮೊಂದಿಗೆ ಈಡೇರಿಸಿಕೊಳ್ಳುತ್ತಿರಬಹುದು. ನೀವು ಅವಳೊಂದಿಗೆ ಒಂದಾಗುವುದಕ್ಕೂ ಮೊದಲು ಸುರಕ್ಷಿತ ವಿಧಾನ ಅನುಸರಿಸಿದ್ದೀರಾ ಅನ್ನೋದು ತಿಳಿಸಿಲ್ಲ.
ಅಕ್ರಮ ಸಂಬಂಧದಿಂದ ಕೂಡಲೇ ಹೊರಬನ್ನಿ. ಗಂಡ ಇದ್ದರೂ ನೀವು ಆಕೆಯೊಂದಿಗೆ ಅನೈತಿಕವಾಗಿ ಲೈಂಗಿಕ ಕ್ರಿಯೆ ನಡೆಸುತ್ತಿರೋದು ತಪ್ಪು.