ಮಹಿಳೆಯರು ಕೇವಲ ಒಂದು ನಿಮಿಷ ಓಡಿದ್ರೆ ಸಾಕು: ಆಸ್ಟಿಯೊಪೊರೋಸಿಸ್ ಮತ್ತು ಮೂಳೆ ಮುರಿತವನ್ನು ತಡೆಯಬಹುದು

ಮಂಗಳವಾರ, 18 ಜುಲೈ 2017 (17:14 IST)
ವಾಷಿಂಗ್ಟನ್:ಮಹಿಳೆಯರು ಪ್ರತಿದಿನ ಕೇವಲ ಒಂದು ನಿಮಿಷ ಓಡಿದ್ರೆ ಸಾಕು ಮೂಳೆಗಳು ಸದೃಢಗೊಳ್ಳುತ್ತಂತೆ. ಈ ಮೂಲಕ ವೃದ್ಧಾಪ್ಯದ ದಿನಗಳಲ್ಲಿ ಕಾಣುವಂತಹ ಎಲುಬಿನ ಸಮಸ್ಯೆಗಳನ್ನು ತಡೆಗಟ್ಟಬಹುದು  ಎಂದು ಹೊಸ ಸಂಶೋಧನೆಯೊಂದು ತಿಳಿಸಿದೆ.
 
ಅಮೆರಿಕದ ಲೀಸೆಸ್ಟರ್ ವಿಶ್ವವಿದ್ಯಾಲಯ ಹಾಗೂ ಎಕ್ಸೆಟರ್ ವಿಶ್ವವಿದ್ಯಾಲಯದ ಸಂಶೋಧಕರು ಪ್ರತಿ ದಿನ 60-120 ಸೆಕೆಂಡ್ ಗಳಷ್ಟು ಕಠಿಣ ಚಟುವಟಿಕೆ ನಡೆಸುವುದರಿಂದ ಮಹಿಳೆಯರ ಮೂಳೆಗಳು ಸದೃಢಗೊಳ್ಳುತ್ತವೆ. ಓಡುವುದು ಸೇರಿದಂತೆ ಕಠಿಣ ಚಟುವಟಿಕೆಯಲ್ಲಿ ತೊಡಗುವುದರಿಂದ ವೃದ್ಧಾಪ್ಯದಲ್ಲಿ ಆಸ್ಟಿಯೊಪೊರೋಸಿಸ್ ಮತ್ತು ಮೂಳೆ ಮುರಿತವನ್ನು ತಡೆಗಟ್ಟಬಹುದು ಎಂದು ಸಂಶೋಧಕರು ಹೇಳಿದ್ದಾರೆ. 
 
2,500 ಮಹಿಳೆಯರನ್ನು ಸಂಶೋಧನೆಗೆ ಒಳಪಡಿಸಲಾಗಿದ್ದು, ಅವರ ಚಟುವಟಿಕೆಗಳ ಮಟ್ಟ ಹಾಗೂ ಮೂಳೆಗಳ ಆರೋಗ್ಯವನ್ನು ಈ ವೇಳೆ ಸಂಶೋಧಕರು ಗಮನಿಸಿದ್ದಾರೆ.  ಒಂದರಿಂದ ಎರಡು ನಿಮಿಷಗಳ ಕಠಿಣ ವ್ಯಾಯಾಮ ಮಾಡಿದ ಮಹಿಳೆಯರ ಮೂಳೆಗಳ ಆರೋಗ್ಯ ಉತ್ತಮ ಸ್ಥಿತಿಯಲ್ಲಿರುವುದು ಇದರಿಂದ ತಿಳಿದುಬಂದಿದೆ.
 

ವೆಬ್ದುನಿಯಾವನ್ನು ಓದಿ