ಪ್ರತಿದಿನ ಹಣ್ಣಿನ ಜ್ಯೂಸ್ ಕುಡಿಯುವವರು ಈ ಸಮಸ್ಯೆಯಿಂದ ಬಳಲುತ್ತಾರಂತೆ
ಬುಧವಾರ, 29 ಮೇ 2019 (06:59 IST)
ಬೆಂಗಳೂರು : ಆರೋಗ್ಯಕ್ಕೆ ಉತ್ತಮವೆಂದು ಕೆಲವರು ಪ್ರತಿದಿನ ಹಣ್ಣಿನ ಜ್ಯೂಸ್ ಕುಡಿಯುತ್ತಾರೆ. ಆದರೆ ಈ ಹಣ್ಣಿನ ಜ್ಯೂಸ್ ಕುಡಿಯುವುದರಿಂದ ಆರೋಗ್ಯದ ಮೇಲೆ ಕೆಲವೊಮ್ಮೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಅಧ್ಯಯನವೊಂದರಿಂದ ತಿಳಿದುಬಂದಿದೆ.
ಫ್ರೂಟ್ ಜ್ಯೂಸ್ ಆರೋಗ್ಯದ ಮೇಲೆ ಬೀರುವ ಪರಿಣಾಮದ ಕುರಿತು ಅಧ್ಯಯನ ಮಾಡಿದ್ದು, ಈ ಸಮೀಕ್ಷೆಯಲ್ಲಿ 13, 400 ಜನರು ಭಾಗವಹಿಸಿದ್ದರು. ಫ್ರೂಟ್ ಜ್ಯೂಸ್ ದಿನಾ ಕುಡಿಯುವವರಲ್ಲಿ ಶೇ.71ರಷ್ಟು ಜನ ಒಬೆಸಿಟಿ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂಬ ಅಂಶ ತಿಳಿದು ಬಂದಿದೆ.
ಹಣ್ಣಿನ ಜ್ಯೂಸ್ ತಯಾರಿಸುವಾಗ ಸಕ್ಕರೆ ಹಾಕಿ ತಯಾರಿಸಲಾಗುವುದು. ದೇಹದಲ್ಲಿ ಸಕ್ಕರೆಯಂಶ ಹೆಚ್ಚಾದಂತೆ ಆರೋಗ್ಯ ಸಮಸ್ಯೆ ಹೆಚ್ಚುವುದು. ಸಿಹಿ ಜ್ಯೂಸ್ ಹೆಚ್ಚಾಗಿ ಕುಡಿಯುವವರಿಗೆ ಒಬೆಸಿಟಿ ಬರುವುದು ಎಂದು ಅಧ್ಯಯನ ಹೇಳಿದೆ. ಆದ್ದರಿಂದ ಹಣ್ಣುಗಳಿಂದ ಜ್ಯೂಸ್ ಮಾಡಿ ಕುಡಿಯುವುದಕ್ಕಿಂತ ಹಾಗೇ ತಿನ್ನುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು.