ಬೆಂಗಳೂರು: ಗಂಡ-ಹೆಂಡತಿ ಎಂದ ಮೇಲೆ ಜಗಳ ಕಾಮನ್. ಆದರೆ ಜಗಳವಾಡಿದ ಮೇಲೆ ರಾಜಿಯಾಗೋದು ಹೇಗೆ ಎಂಬುದಕ್ಕೆ ಕೆಲವು ಸುಲಭ ಟ್ರಿಕ್ಸ್ ಇಲ್ಲಿದೆ ನೋಡಿ.
ಫೋನ್ ಮಾಡಿ
ಜಗಳವಾಡಿ ಕಚೇರಿಗೆ ಹೋದ ಮೇಲೆ ಇಬ್ಬರೂ ಅದನ್ನೇ ಮನಸ್ಸಲ್ಲಿಟ್ಟುಕೊಂಡು ಕೊರಗುತ್ತಿರುತ್ತಾರೆ. ಈ ವೇಳೆ ಅನಿರೀಕ್ಷಿತವಾಗಿ ಸಂಗಾತಿಗೆ ಕರೆ ಮಾಡಿ ಮೃದುವಾಗಿ ಮಾತನಾಡಿ. ಸಾರಿ ಕೇಳಲು ನಿಮ್ಮ ಅಹಂ ಅಡ್ಡ ಬಂದರೆ ಬೇರೆ ವಿಚಾರದ ಬಗ್ಗೆ ಮಾತನಾಡಿ. ಅದರಿಂದ ಇಬ್ಬರ ಮನಸ್ಸೂ ಹಗುರವಾಗುವುದು.
ಗಿಫ್ಟ್ ಕೊಡಿ
ಸಂಜೆ ಮನೆಗೆ ಬರುವಾಗ ಆಕೆ/ಆತನಿಗೆ ಇಷ್ಟವಾದ ಯಾವುದಾದರೂ ವಸ್ತುವನ್ನು ಗಿಫ್ಟ್ ಆಗಿ ತನ್ನಿ. ಇದನ್ನು ಸರ್ಪ್ರೈಸ್ ಆಗಿ ಕೊಟ್ಟರೆ ಕೋಪ ಮಾಯವಾಗಬಹುದು!
ಸಂಗಾತಿಯ ಪೋಷಕರ ಬಗ್ಗೆ ಕಾಳಜಿ ತೋರಿ!
ಹೌದು. ಎಲ್ಲಾ ಪುರುಷ ಮತ್ತು ಮಹಿಳೆಯರಿಗೂ ತನ್ನ ಸಂಗಾತಿಯಾದವರು ತನ್ನ ಪೋಷಕರನ್ನು ಗೌರವಿಸಬೇಕು ಎಂದಿರುತ್ತದೆ. ಹೀಗಾಗಿ ರಾಜಿಯಾಗಲು ಉತ್ತಮ ಉಪಾಯವೆಂದರೆ ಪೋಷಕರಿಗೆ ಸಹಾಯ ಅಥವಾ ಇಷ್ಟವಾದ ಕೆಲಸ ಮಾಡಿಕೊಡುವುದು. ಇದರಿಂದ ನಿಮ್ಮ ಬಗ್ಗೆ ಇದ್ದ ಮುನಿಸು ಕರಗಿ ಹೋಗುತ್ತದೆ!
ಸಿಂಪಲ್ಲಾಗಿ ಸಾರಿ ಕೇಳಿ
ಕೆಲವೊಮ್ಮೆ ತಪ್ಪು ನಿಮ್ಮದಲ್ಲದೇ ಹೋದರೂ ಸಾರಿ ಎಂದು ಕೇಳುವುದರಿಂದ ಇಬ್ಬರ ನಡುವಿನ ಮುನಿಸು ಮರೆಯಾಗುವುದಾದರೆ ಅದನ್ನು ಹೇಳುವುದರಿಂದ ತಪ್ಪಿಲ್ಲ.