ಹೋಳಿ ಹಬ್ಬದಲ್ಲಿ ಬಣ್ಣದ ಓಕುಳಿ ಆಡಿ ಅಲರ್ಜಿಯಾಗದಂತೆ ತಡೆಯಲು ಹೀಗೆ ಮಾಡಿ
ಗುರುವಾರ, 5 ಮಾರ್ಚ್ 2020 (09:30 IST)
ಬೆಂಗಳೂರು: ಇನ್ನೇನು ಹೋಳಿ ಹಬ್ಬ ಬಂದೇ ಬಿಡ್ತು. ಸೋಮವಾರ ಅಂದರೆ ಮಾರ್ಚ್ 9 ರಂದು ಹೋಳಿ ಹಬ್ಬವಿದ್ದು ಎಲ್ಲರೂ ಬಣ್ಣದ ಓಕುಳಿ ಆಡಿ ಸಂಭ್ರಮಾಚರಿಸುವುದು ಮಾಮೂಲು. ಆದರೆ ಬಣ್ಣದ ನೀರು ಕೆಲವರಿಗೆ ಅಲರ್ಜಿ ತರುತ್ತದೆ. ಹೀಗಾಗಿ ಓಕುಳಿ ಆಡಿದ ಬಳಿಕ ಕೆಲವೊಂದು ಟಿಪ್ಸ್ ಪಾಲಿಸಿದರೆ ಚರ್ಮದ ಅಲರ್ಜಿ ತಡೆಯಬಹುದು.
ಆದಷ್ಟು ರಾಸಾಯನಿಕ ಬಣ್ಣ ಬಳಸಬೇಡಿ
ಹೋಳಿ ಆಡಿದ ಬಳಿಕ ಹರಿಯುವ ನೀರಿನಲ್ಲಿ ಸುಮಾರು 10 ನಿಮಿಷ ಮೈಯೊಡ್ಡಿ ಚೆನ್ನಾಗಿ ತೊಳೆದುಕೊಳ್ಳಿ.
ಹೋಳಿಯ ನಂತರ ಸ್ನಾನ ಮಾಡುವಾಗ ತೇವಾಂಶಭರಿತ ಸಾಬೂನು ಬಳಸಿ.
ಮುಖಕ್ಕೆ ಗುಣಮಟ್ಟದ ಫೇಸ್ ವಾಶ್ ಬಳಸಿ ಶುಚಿಗೊಳಿಸಿ. ಆದಷ್ಟು ಶುಚಿಗೊಳಿಸುವಾಗ ಮೃದುವಾಗಿ ಉಜ್ಜಿಕೊಳ್ಳಿ.
ತಲೆಕೂದಲಿಗೆ ಶಾಂಪೂ ಬಳಸಿ ಬಳಿಕ ಕಂಡೀಷನರ್ ಬಳಸಿ.
ಸ್ನಾನದ ಬಳಿಕ ಕೂದಲಿಗೆ ಕಲರ್ ಪ್ರೊಟೆಕ್ಟ್ ಕಂಡೀಷನರ್ ಬಳಸಿ. ಸ್ನಾನದ ಬಳಿಕ ಮೈಗೆ ಯಾವುದಾದರೂ ತೇವಾಂಶ ಭರಿತ ಬಾಡಿ ಲೋಷನ್ ಅಥವಾ ಕೊಬ್ಬರಿ ಎಣ್ಣೆ ಬಳಸಿ.