ಮಾಡುವ ವಿಧಾನ: ಕುಕ್ಕರ್ ಗೆ ನೀರು ಹಾಕಿ ಅದರ ಮೇಲೆ ಒಂದು ಪಾತ್ರೆಯಲ್ಲಿ ನೀರು ಹಾಕದೆ ಗೆಣಸನ್ನು ಇಟ್ಟು ಮುಚ್ಚಳ ಮುಚ್ಚಿ 2 ವಿಷಲ್ ತೆಗೆಯಿರಿ. ಬಳಿಕ ಅದರ ಸಿಪ್ಪೆ ತೆಗೆದು ತುರಿದಿಟ್ಟುಕೊಳ್ಳಿ. ಒಂದು ಬಾಣಲೆ ಬಿಸಿ ಮಾಡಿ ಅದರಲ್ಲಿ 1 ಬಟ್ಟಲಿನಷ್ಟು ಗೆಣಸು ಹಾಕಿ, ಅದಕ್ಕೆ ½ ಬಟ್ಟಲು ಬೆಲ್ಲ ಹಾಕಿ ಬಿಸಿ ಮಾಡುತ್ತಾ ಕೈಯಾಡಿಸುತ್ತಿರಿ. ಅದು ನೀರಾಗಿ ಬಳಿಕ ಗಟ್ಟಿಯಾಗುತ್ತದೆ. ಬಳಿಕ ಅದನ್ನುಕೆಳಗಿಳಿಸಿ ತಣ್ಣಗಾಗಿಸಿ. ಅದಕ್ಕೆ ಯಾಲಕ್ಕಿ ಪುಡಿ ಹಾಕಿ ಮಿಕ್ಸ್ ಮಾಡಿ ಉಂಡೆಗಳನ್ನು ಮಾಡಿಟ್ಟುಕೊಳ್ಳಿ.