ಯಜ್ವೇಂದ್ರ ಚಹಲ್ ಗೆ ಸೋಡಾ ಚೀಟಿ ಕೊಟ್ಟು ಧನಶ್ರೀವರ್ಮ ಈ ಕ್ರಿಕೆಟಿಗನ ಕೈ ಹಿಡಿಯುತ್ತಾರಾ

ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ಯಜ್ವೇಂದ್ರ ಚಹಲ್ ಮತ್ತು ಪತ್ನಿ ಧನಶ್ರೀವರ್ಮ ಸದ್ಯದಲ್ಲೇ ವಿಚ್ಛೇದನ ಪಡೆದುಕೊಳ್ಳಲಿದ್ದಾರೆ ಎಂಬ ಸುದ್ದಿಗಳ ಬೆನ್ನಲ್ಲೇ ಅವರು ಮತ್ತೊಬ್ಬ ಕ್ರಿಕೆಟಿಗನ ಕೈ ಹಿಡಿಯಲಿದ್ದಾರೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.

ಚಹಲ್ ಪತ್ನಿ ಧನಶ್ರೀವರ್ಮ ಮತ್ತು ಕ್ರಿಕೆಟಿಗ ಶ್ರೇಯಸ್ ಅಯ್ಯರ್ ಉತ್ತಮ ಸ್ನೇಹಿತರು. ಹಲವು ಬಾರಿ ಇಬ್ಬರೂ ಪಾರ್ಟಿಗಳಲ್ಲಿ ಜೊತೆಯಾಗಿರುವ ಫೋಟೋಗಳೂ ವೈರಲ್ ಆಗಿದ್ದವು. ಇದಾದ ಬಳಿಕ ನೆಟ್ಟಿಗರು ಇಬ್ಬರ ನಡುವೆ ಲಿಂಕ್ ಅಪ್ ಮಾಡಲು ಶುರು ಮಾಡಿದ್ದರು.

ಇದು ಎಷ್ಟೆಂದರೆ ಒಂದು ವರ್ಷದ ಹಿಂದೆ ಚಹಲ್ ವಿಚ್ಛೇದನ ರೂಮರ್ ಹಬ್ಬಿದಾಗಲೂ ಇದಕ್ಕೆ ಅಯ್ಯರ್ ಜೊತೆಗೆ ಧನಶ್ರೀಗಿರುವ ಸ್ನೇಹವೇ ಕಾರಣ ಎಂದು ಕೆಲವರು ಕಾಮೆಂಟ್ ಮಾಡಿದ್ದರು. ಇದು ಇಷ್ಟಕ್ಕೇ ನಿಂತಿಲ್ಲ. ಈಗಲೂ ನೆಟ್ಟಿಗರು ಶ್ರೇಯಸ್ ಹೆಸರು ಥಳುಕು ಹಾಕಿ ಟ್ರೋಲ್ ಮಾಡುತ್ತಿದ್ದಾರೆ. ಚಹಲ್ ಗೆ ಸೋಡಾ ಚೀಟಿ ಕೊಟ್ಟು ಧನಶ್ರೀ ಶ್ರೇಯಸ್ ಕೈ ಹಿಡಿಯಲಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಕಾಲೆಳೆಯುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ