35 ಯೂಟ್ಯೂಬ್, ಟ್ವಿಟರ್, ಇನ್ಸ್ಟಾ ಖಾತೆ ಬ್ಲಾಕ್!

ಶನಿವಾರ, 22 ಜನವರಿ 2022 (12:30 IST)
ನವದೆಹಲಿ : ಕೇಂದ್ರ ಗುಪ್ತಚರ ಇಲಾಖೆ ನೀಡಿದ ಮಹತ್ವದ ಮಾಹಿತಿ ಆಧರಿಸಿ ಕೇಂದ್ರ ಸರ್ಕಾರ ತಕ್ಷಣವೇ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.
 
ದೇಶದಲ್ಲಿ ಭಾರತ ವಿರೋಧಿ ಚಟುವಟಿಕೆ, ಭಾರತ ವಿರೋಧಿ ವಿಷಯ ಬಿತ್ತರ ಸೇರಿದಂತೆ ದೇಶ ವಿರೋಧಿ ಚಟುವಟಿಕೆ ನಡೆಸುತ್ತಿದ್ದ ಪಾಕಿಸ್ತಾನ ಮೂಲದ ಯೂಟ್ಯೂಬ್, ಟ್ವಿಟರ್ ಇನ್ಸ್ಟಾ ಸೇರಿದಂತೆ ಒಟ್ಟು 41ಖಾತೆಗಳನ್ನು ಕೇಂದ್ರ ಸರ್ಕಾರ ಬ್ಲಾಕ್ ಮಾಡಿದೆ.

ಪಾಕಿಸ್ತಾನದಿಂದ ಕಾರ್ಯನಿರ್ವಹಿಸುತ್ತಿದ್ದ ಈ ಖಾತೆಗಳು ಭಾರತ ವಿರೋಧಿ ವಿಷಯಗಳನ್ನು ಯೂಟ್ಯೂಬ್ ಚಾನೆಲ್, ಟ್ವಿಟರ್,ಫೇಸ್ಬುಕ್, ಇನ್ಸ್ಟಾಗ್ರಾಂ ಮೂಲಕ ಬಿತ್ತರಿಸುತ್ತಿತ್ತು. ಒಂದು ಸಮುದಾಯವನ್ನು ದೂಷಿಸಿ, ಭಾರತವನ್ನು ಒಡೆಯುವ ಹಾಗೂ ದೇಶದ ಭದ್ರತೆಗೆ ಸಾವಾಲೆಸುವ ಕೆಲಸ ಮಾಡುತ್ತಿತ್ತು.

ಈ ಕುರಿತು ಗುಪ್ತಚರ ಇಲಾಖೆ ನೀಡಿದ ಮಾಹಿತಿ ಆಧಿರಿಸಿ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ ಈ ಖಾತೆಗಳನ್ನು ಬ್ಲಾಕ್ ಮಾಡಿದೆ  ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯದ ಕಾರ್ಯದರ್ಶಿ ವಿಕ್ರಮ್ ಸಾಹೆ ಈ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಪಾಕಿಸ್ತಾನದಿಂದ ಕಾರ್ಯನಿರ್ವಹಿಸುತ್ತಿರುವ 35 ಯೂಟ್ಯೂಬ್ ಚಾನೆಲ್, 2 ಟ್ವಿಟರ್ ಖಾತೆ, 2 ಇನ್ಸ್ಟಾಗ್ರಾಂ ಖಾತೆ, 2 ವೆಬ್ಸೈಟ್ ಹಾಗೂ 2 ಫೇಸ್ಬುಕ್ ಖಾತೆಗಳು ಭಾರತದಲ್ಲಿ ವಿಷ ಬೀಜಗಳನ್ನು ಬಿತ್ತುವ ದೇಶ ವಿರೋಧಿ ಕೆಲಸ ಮಾಡುತಿತ್ತು.

ಈ ಯ್ಯೂಟೂಬ್ ಚಾನೆಲ್ಗಳು 1.20 ಕೋಟಿ ಸಬ್ಸ್ಕ್ರೈಬರ್ ಹೊಂದಿದೆ. ಇಲ್ಲಿ ಅಪ್ಲೋಡ್ ಮಾಡಿರುವ ವಿಡಿಯೋಗಳು 130 ಕೋಟಿ ವೀಕ್ಷಣೆ ಕಂಡಿದೆ. ಹೀಗೆ ದೇಶ ವಿರೋಧಿ ಚಟುವಟಿಕೆಯ ಖಾತೆಗಳನ್ನು ನಿಷೇಧಿಸಲಾಗಿದೆ ಎಂದು ವಿಕ್ರಮ ಸಾಹೆ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ