ಮೀನು ತಿಂದು ದೇಹದ ಅಂಗಾಂಗ ಕಳೆದುಕೊಂಡ ಮಹಿಳೆ!?

ಸೋಮವಾರ, 18 ಸೆಪ್ಟಂಬರ್ 2023 (11:51 IST)
ನ್ಯೂಯಾರ್ಕ್ : ಮಹಿಳೆಯೊಬ್ಬರು ಮೀನು ತಿಂದು ತನ್ನ ದೇಹದ ನಾಲ್ಕು ಅಂಗಗಳನ್ನು ಕಳೆದುಕೊಂಡಿರುವ ದಾರುಣ ಘಟನೆಯೊಂದು ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ.

ಲಾರಾ ಬರಾಜಾಸ್ (40) ಅವರು ತಿಂಗಳುಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇದೀಗ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.

ಬ್ಯಾಕ್ಟೀರಿಯಾ ಸೋಂಕಿನಿಂದ ಮಹಿಳೆ ಅಂಗಾಂಗ ಕಳೆದುಕೊಂಡಿರುವುದಾಗಿ ವರದಿಯಾಗಿದೆ. ಬ್ಯಾಕ್ಟೀರಿಯಾದ ಮಾರಣಾಂತಿಕ ಸ್ಟ್ರೈನ್ನಿಂದ ಕಲುಷಿತಗೊಂಡಿರುವ ಕಡಿಮೆ ಬೇಯಿಸಿದ ತಿಲಾಪಿಯಾ ಮೀನಿನ ಸೇವನೆಯಿಂದ ಉಂಟಾಗುತ್ತದೆ ಎನ್ನಲಾಗಿದೆ.

ಬರಾಜಸ್ ಅವರು ಸ್ಥಳೀಯ ಮಾರುಕಟ್ಟೆಯಲ್ಲಿ ಮೀನು ಖರೀದಿಸಿದ್ದಾರೆ. ಆ ಮೀನಿನ ಸಾಂಬರ್ ತಿಂದ ಬಳಿಕ ಅವರು ಅಸ್ವಸ್ಥಗೊಂಡಿದ್ದಾರೆ. ಬಹುತೇಕ ಪ್ರಾಣವನ್ನೇ ಕಳೆದುಕೊಳ್ಳುವ ಹಂತಕ್ಕೆ ತಲುಪಿದ್ದ ಬರಾಜಸ್ ನನ್ನು ಕೃತಕ ಉಸಿರಾಟ ವ್ಯವಸ್ಥೆಯಲ್ಲಿ ಇಡಲಾಗಿತ್ತು. ಕ್ರಮೇಣ ಅವರ ಬೆರಳುಗಳು, ಪಾದಗಳು, ತುಟಿಗಳು ಕಪ್ಪು ಬಣ್ಣಕ್ಕೆ ತಿರುಗುತ್ತಾ ಬಂದವು. ಮೂತ್ರಪಿಂಡಗಳು ಸಂಪೂರ್ಣ ವಿಫಲವಾಗಿವೆ ಎಂದು ಮೆಸ್ಸಿನಾ ಮಾಹಿತಿ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ