ಉಕ್ರೇನ್ಗೆ ಹೆಚ್ಚುವರಿ ನೆರವು : ಬೈಡೆನ್

ಮಂಗಳವಾರ, 24 ಮೇ 2022 (12:25 IST)
ಉಕ್ರೇನ್ ಮೇಲಿನ ರಷ್ಯಾ ಆಕ್ರಮಣ ನಾಲ್ಕನೇ ತಿಂಗಳನ್ನು ತಲುಪಿರುವ ಹಿನ್ನೆಲೆಯಲ್ಲಿ ಉಕ್ರೇನ್ ಹೆಚ್ಚುವರಿಯಾಗಿ 3 ಲಕ್ಷ ಕೋಟಿ ರು. ನೆರವು ನೀಡುವ ಕಾನೂನಿಗೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಸಹಿ ಹಾಕಿದ್ದಾರೆ.
 
ಈ ಹೊಸ ಶಾಸನದಂತೆ 1.5 ಲಕ್ಷ ಕೋಟಿ ರು. ಮಿಲಿಟರಿ ಸಹಾಯ, 60 ಸಾವಿರ ಕೋಟಿ ರು. ಆರ್ಥಿಕ ಸಹಾಯ, 37.5 ಕೋಟಿ ರು. ಆಹಾರ ಸೌಲಭ್ಯ ಮತ್ತು 7500 ಕೋಟಿ ರು. ನಿರಾಶ್ರಿತರ ಸಹಾಯಕ್ಕಾಗಿ ನೀಡಲಾಗುತ್ತದೆ.

ಮುಂದಿನ ಸೆಪ್ಟೆಂಬರ್ವರೆಗೆ ಉಕ್ರೇನ್ ಸಹಾಯ ಒದಗಿಸಲು ಈ ಶಾಸನ ರೂಪಿಸಲಾಗಿದೆ. ಇದಕ್ಕೂ ಮೊದಲು ಅಮೆರಿಕ 1 ಲಕ್ಷ ರು. ನೆರವನ್ನು ಒದಗಿಸಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ