ಈ ಕಾರಣಕ್ಕೆ ಭಾರತೀಯರಲ್ಲಿ ಕ್ಷಮೆ ಕೇಳಿದ ಅಮೇರಿಕಾ

ಶುಕ್ರವಾರ, 5 ಜೂನ್ 2020 (08:32 IST)
ವಾಷಿಂಗ್ಟನ್ : ಪ್ರತಿಭಟನೆಯ ಸಮಯದಲ್ಲಿ ಪ್ರತಿಭಟನಾಕಾರರು ಮಹಾತ್ಮ ಗಾಂಧಿ ಪ್ರತಿಮೆಯನ್ನು  ಹಾನಿಗೊಳಿಸಿದ್ದಕ್ಕೆ ಅಮೇರಿಕಾ ಭಾರತೀಯರಲ್ಲಿ ಕ್ಷಮೆ ಕೋರಿದ್ದಾರೆ.


ಜಾರ್ಜ್ ಫ್ಲಾಯ್ಡ್ ಹತ್ಯೆಯನ್ನು ಖಂಡಿಸಿ ಕಪ್ಪು ವರ್ಣಿಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಪೊಲೀಸರು ಸಾರ್ವಜನಿಕರಲ್ಲಿ ಕ್ಷಮೆ ಕೇಳಿದ್ದರೂ ಕೂಡ ಈ ಪ್ರತಿಭಟನೆ ತಾರಕಕ್ಕೇರಿದೆ. ಆ ವೇಳೆ ಭಾರತೀಯ ರಾಯಭಾರಿ ಕಚೇರಿಯ ಆವರಣದಲ್ಲಿರುವ ಗಾಂಧೀಜಿ ಪ್ರತಿಮೆಯನ್ನು ಭಗ್ನಗೊಳಿಸಿದ್ದಾರೆ.


ಈ ಬಗ್ಗೆ ಅಮೇರಿಕದ ರಾಯಭಾರಿ ಕೆನ್ ಜಸ್ಟರ್ ,  ವಾಷಿಂಗ್ಟನ್ ನಲ್ಲಿ ಗಾಂಧಿ ಪ್ರತಿಮೆ ಭಗ್ನವಾಗಿದ್ದಕ್ಕೆ ಬಹಳ ಬೇಸರವಾಗಿದೆ. ಈ ಬಗ್ಗೆ ನಾವು ಕ್ಷಮೆ ಕೇಳುತ್ತಿದ್ದೇವೆ ಎಂದು  ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ