ಚೀನಾ : ಕಡಿಮೆ ಜನನ ಪ್ರಮಾಣ ಮುಂದುವರಿಕೆ

ಗುರುವಾರ, 19 ಜನವರಿ 2023 (13:13 IST)
ಜನಸಂಖ್ಯಾ ನಿಯಂತ್ರಣಕ್ಕೆ ಚೀನಾ ಹೊರಡಿಸಿದ ನೀತಿಯಿಂದ ದುಡಿಯುವ ವರ್ಗವಿಲ್ಲದೇ ಆರ್ಥಿಕ ಸಂಕಷ್ಟ ಎದುರಿಸಿತು. ಆಗ ಹೆಚ್ಚಿನ ಮಕ್ಕಳನ್ನು ಹೊಂದುವವರಿಗೆ ಮಕ್ಕಳ ಶಿಕ್ಷಣದ ವೆಚ್ಚ,

ಜೀವನ ವೆಚ್ಚವನ್ನು ಸರ್ಕಾರವೇ ಭರಿಸುವುದಾಗಿ ಚೀನಾ ಆಫರ್ ನೀಡಿತು. 2016 ರಿಂದ ಎಲ್ಲಾ ವಿವಾಹಿತ ದಂಪತಿಗಳು ಎರಡನೇ ಮಗುವನ್ನು ಹೊಂದಲು ಅನುಮತಿಸಿತ್ತು. 2021 ರಲ್ಲಿ, ಬೀಜಿಂಗ್ ದಂಪತಿಗಳಿಗೆ ಮೂರು ಮಕ್ಕಳನ್ನು ಹೊಂದಲು ಅವಕಾಶ ನೀಡಿತ್ತು. ಜಪಾನ್ ಮತ್ತು ದಕ್ಷಿಣ ಕೊರಿಯಾದಂತಹ ದೇಶಗಳು ಮತ್ತು ಯುರೋಪಿನ ಇತರ ದೇಶಗಳು ಸಹ ಇದೇ ರೀತಿಯ ನಡೆಯನ್ನು ಅನುಸರಿಸಿದ್ದವು. 

ಚಿಕ್ಕ ಮಕ್ಕಳನ್ನು ಪೋಷಿಸುವ ಜನರಿಗೆ ಕೆಲಸದ ಸಮಯದಲ್ಲಿ ಮಿತಿ, ಮನೆಯಿಂದ ಕೆಲಸ ಮಾಡುವ ಆಯ್ಕೆ ಮತ್ತು ವಿತ್ತೀಯ ಪ್ರೋತ್ಸಾಹದಂತಹ ಕ್ರಮಗಳನ್ನು ಸಹ ಚೀನಾದಲ್ಲಿ ಘೋಷಿಸಲಾಗಿದೆ.  

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ