ಭಿನ್ನಾಭಿಪ್ರಾಯ ಮರೆತು ನಮ್ಮ ಲಸಿಕೆಯನ್ನು ತರಿಸಿಕೊಳ್ಳಿ : ಪೂನಾವಾಲಾ

ಬುಧವಾರ, 18 ಜನವರಿ 2023 (11:00 IST)
ದಾವೋಸ್ : ಭಾರತದೊಂದಿಗಿನ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಚೀನಾ ಕೋವಿಡ್ ಲಸಿಕೆಗಳನ್ನು ತರಿಸಿಕೊಳ್ಳುವ ಬಗ್ಗೆ ಯೋಚನೆ ಮಾಡಬೇಕು ಎಂದು ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಮುಖ್ಯಸ್ಥ ಅದಾರ್ ಪೂನಾವಾಲಾ ಸಲಹೆ ನೀಡಿದ್ದಾರೆ.

ವಿಶ್ವ ಆರ್ಥಿಕ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಸ್ವಿಜ್ಜರ್ಲ್ಯಾಂಡ್ನ ದಾವೋಸ್ಗೆ ಆಗಮಿಸಿರುವ ಅವರು ಮಾಧ್ಯಮದ ಜೊತೆ ಮಾತನಾಡಿ, ಚೀನಾ ಇದೀಗ ಕೋವಿಡ್ನಿಂದ ಚೇತರಿಸಿಕೊಳ್ಳುವುದು ಮುಖ್ಯವಾಗಿದೆ.

ಇದು ಜಗತ್ತಿಗೂ ಒಳಿತು. ನಾವು ಚೀನಾದೊಂದಿಗೆ ತೊಡಗಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ರಾಜಕೀಯ ಭಿನ್ನಾಭಿಪ್ರಾಯಗಳು, ಸಮಸ್ಯೆಗಳು ಹಾಗೂ ಯಾವುದೇ ರೀತಿಯ ಆತಂಕಗಳನ್ನು ಬದಿಗಿಟ್ಟು ನಮ್ಮ ಲಸಿಕೆಗಳನ್ನು ಬೂಸ್ಟರ್ ಡೋಸ್ ಆಗಿ ಪಡೆದುಕೊಳ್ಳಲು ಕೇಳುತ್ತಿದ್ದೇವೆ ಎಂದಿದ್ದಾರೆ.

ಒಂದು ವೇಳೆ ಚೀನಾ ಈಗಲೇ ಮಹತ್ವದ ನಿರ್ಧಾರ ಮಾಡದೇ ಹೋದರೆ ಮುಂದೆ ಪರಿಸ್ಥಿತಿಯನ್ನು ನಿಭಾಯಿಸಲು ಕಷ್ಟವಾಗಬಹುದು ಎಂದು ಎಚ್ಚರಿಕೆ ನೀಡಿದರು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ