ಮಂಗಳೂರು: ಧರ್ಮಸ್ಥಳದಲ್ಲಿ ನಿನ್ನೆ ನಡೆದಿದ್ದ ಗಲಾಟೆ ಸಂಬಂಧ ಸೌಜನ್ಯ ಪರ ಹೋರಾಟಗಾರರಾದ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟೆಣ್ಣನವರ್, ಯೂ ಟ್ಯೂಬರ್ ಸಮೀರ್ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಖಾಸಗಿ ವಾಹಿನಿಯ ಪತ್ರಕರ್ತನ ಮೇಲೆ ಹಲ್ಲೆ ನಡೆಸಿದ ಘಟನೆ ಸಂಬಂಧ ಈ ಮೂವರ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಖಾಸಗಿ ವಾಹಿನಿಯ ವರದಿಗಾರ ಹರೀಶ್ ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದರು. ಎಫ್ಐಆರ್ ನಲ್ಲಿ ಗಿರೀಶ್ ಮಟ್ಟೆಣ್ಣನವರ್ ಎ1, ಮಹೇಶ್ ಶೆಟ್ಟಿ ಎ2 ಮತ್ತು ಸಮೀರ್ ಎ3 ಮತ್ತು ಜಯಂತ್ ಎ4 ಆರೋಪಿಗಳಾಗಿದ್ದಾರೆ.
ಇದಕ್ಕೆ ಮೊದಲು ಧರ್ಮಸ್ಥಳದ ನೇತ್ರಾವತಿ ಪಾಂಗಳದ ಬಳಿ ಯೂ ಟ್ಯೂಬರ್ ಗಳ ಮೇಲೆ ಹಲ್ಲೆ ನಡೆದಿತ್ತು. ಧರ್ಮಸ್ಥಳದ ಬಗ್ಗೆ ಅಪಪ್ರಪಚಾರ ನಡೆಸುತ್ತೀರಿ ಎಂದು ಭಕ್ತರೇ ಹಲ್ಲೆ ನಡೆಸಿದ್ದರು. ಹಲ್ಲೆಗೊಳಗಾದ ಯೂ ಟ್ಯೂಬರ್ ಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಈ ವೇಳೆ ವರದಿಗೆ ಬಂದಿದ್ದ ಖಾಸಗಿ ವಾಹಿನಿ ವರದಿಗಾಗ ಗಿರೀಶ್ ಮಟ್ಟೆಣ್ಣನವರ್ ರನ್ನು ಮಾತನಾಡಲು ಪ್ರಯತ್ನಿಸಿದ್ದಾರೆ. ಈ ವೇಳೆ ಅವರು ನನಗೆ ಬೈಯಲು ಆರಂಭಿಸಿದರು. ಅಷ್ಟರಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಅವರ ಸಂಗಡಿಗರು ಹಲ್ಲೆ ನಡೆಸಿದ್ದಾರೆ ಎಂದು ವರದಿಗಾರ ದೂರಿನಲ್ಲಿ ಆರೋಪಿಸಿದ್ದಾರೆ.