ಜಪಾನಿನಲ್ಲಿ ಕೆಂಪು ದ್ರಾಕ್ಷಿಯ ಗೊಂಚಲೊಂದು ಮಾರಾಟವಾದ ಬೆಲೆ ಕೇಳಿದ್ರೆ ದಂಗಾಗ್ತೀರಾ?

ಶುಕ್ರವಾರ, 12 ಜುಲೈ 2019 (09:32 IST)
ಜಪಾನ್ : ಜಪಾನಿನಲ್ಲಿ ಮಂಗಳವಾರ ನಡೆದ ಹರಾಜಿನಲ್ಲಿ ಕೆಂಪು ದ್ರಾಕ್ಷಿಯ ಗೊಂಚಲೊಂದನ್ನು 1.2 ದಶಲಕ್ಷ ಯೆನ್‌ (ಅಂದಾಜು 7,55,000 ರೂ) ಗಳಿಗೆ ಮಾರಾಟ ಮಾಡಲಾಗಿದೆ.



ರೂಬಿ ರೋಮನ್‌ ತಳಿಯ ಈ ದ್ರಾಕ್ಷಿ ಕಡಿಮೆ ಆಮ್ಲೀಯತೆ ಮತ್ತು ಹೆಚ್ಚಿನ ಸಕ್ಕರೆ ಅಂಶವನ್ನು ಹೊಂದಿದ್ದು ಅತ್ಯಂತ ರಸಭರಿತವಾಗಿದೆ. ಇದು ಹನ್ನೆರಡು ವರ್ಷಗಳ ಹಿಂದೆ ಮಾರುಕಟ್ಟೆಗೆ ಬಂದಿತ್ತು. ಪ್ರತಿಯೊಂದು ದ್ರಾಕ್ಷಿಯೂ 20 ಗ್ರಾಂ ತೂಗುತ್ತದೆ.

 

ಹಯಾಕುರಕುಸೊ ಎಂಬ ಕಂಪೆನಿಯು ಕನಾಜಾವಾದ ಕೇಂದ್ರ ಮಾರುಕಟ್ಟೆಯಲ್ಲಿ ಸಗಟು ವ್ಯಾಪಾರಿಯೊಬ್ಬನ ಹರಾಜಿನಲ್ಲಿ ಈ ದ್ರಾಕ್ಷಿಯನ್ನು ಖರೀದಿಸಿದೆ.  ಈ ದ್ರಾಕ್ಷಿ ತಳಿ ಮಾರುಕಟ್ಟೆಗೆ ಬಂದ ಅತ್ಯಂತ ದುಬಾರಿ ತಳಿಯಾಗಿದೆ ಎಂದು  ಅಲ್ಲಿನ ಹರಾಜುಗಾರರು ಹೇಳಿದ್ದಾರೆ.

 

ಈ ತಳಿ 26,000 ಬಂಚ್ ಗಳನ್ನು ಸೆಪ್ಟೆಂಬರ್‌ ಅಂತ್ಯಕ್ಕೆ ರಫ್ತಾಗುತ್ತದೆ ಎಂದು ಅಂದಾಜಿಸಲಾಗಿದೆ. ಉಡುಗೊರೆ ಹಾಗೂ ಬ್ಯುಸಿನೆಸ್‌ ಸಂದರ್ಭದಲ್ಲಿ ಪ್ರಮೋಷನ್‌ ಮಾಡುವ ಉದ್ದೇಶಕ್ಕಾಗಿ ಈ ಹಣ್ಣುಗಳನ್ನು ಖರೀದಿ ಮಾಡಲಾಗುತ್ತದೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ