ಸಿಲಿಕಾನ್ ಸಿಟಿಯಿಂದ ಯೂರೋಪ್ ಸೇನೆಗೆ ಬ್ಯಾಟರಿ

ಸೋಮವಾರ, 16 ಮೇ 2022 (10:20 IST)
ನವದೆಹಲಿ: ಬೆಂಗಳೂರು ಮೂಲದ ಪ್ರವೇಗ್‌ ಎಂಬ ಸ್ಟಾರ್ಟಪ್‌ ಕಂಪನಿಯು ಯುರೋಪಿಯನ್‌ ದೇಶಗಳ ಸಶಸ್ತ್ರ ಪಡೆಗಳಿಗೆ ಬ್ಯಾಟರಿ ಪೂರೈಕೆ ಮಾಡುವ ಟೆಂಡರ್‌ ಗೆದ್ದುಕೊಂಡಿದೆ. ತನ್ಮೂಲಕ ಮೇಡ್‌ ಇನ್‌ ಇಂಡಿಯಾ ಬ್ಯಾಟರಿಗಳಿಗೆ ಜಾಗತಿಕ ಮಾನ್ಯತೆ ದೊರೆತಂತಾಗಿದೆ.
 
ಎಂ2ಎಂ ಫ್ಯಾಕ್ಟರಿ ಅಂಡ್‌ ಎಎಂಜಿ ಪ್ರೋ ಕಂಪನಿಗಳು ಯುರೋಪಿಯನ್‌ ದೇಶಗಳ ಸಶಸ್ತ್ರ ಪಡೆಗಳಿಗೆ ದೊಡ್ಡ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳನ್ನು ಹಾಗೂ ಇನ್ನಿತರ ಇಂಧನ ಸಂಬಂಧಿ ಉಪಕರಣಗಳನ್ನು ಪೂರೈಸುತ್ತವೆ. ಆರ್ಮರ್‌, ಡೆಫ್ಕಾನ್‌, ಕ್ಯಾಸಿಯೋ, ಮ್ಯಾಗ್ನಮ್‌, ಲೆದರ್‌ಮನ್‌ ಮುಂತಾದ 90 ಪ್ರಸಿದ್ಧ ಬ್ರ್ಯಾಂಡ್‌ಗಳನ್ನು ಈ ಕಂಪನಿಗಳು ಜಂಟಿಯಾಗಿ ಹೊಂದಿವೆ. ಈ ಕಂಪನಿಗಳು ಈಗ ಪ್ರವೇಗ್‌ ಜೊತೆಗೂಡಿ ತಮ್ಮ ಉತ್ಪನ್ನಗಳಿಗೆ ಬೇಕಾದ ಬ್ಯಾಟರಿಗಳನ್ನು ಭಾರತದಲ್ಲಿ ತಯಾರಿಸಲಿವೆ. ತನ್ಮೂಲಕ ಪ್ರವೇಗ್‌ ಕಂಪನಿಯ ಬ್ಯಾಟರಿಗಳು ಯುರೋಪಿಯನ್‌ ದೇಶಗಳ ಸೇನಾಪಡೆಗೆ ಸೇರ್ಪಡೆಯಾಗಲಿವೆ.
 
ಈ ಬ್ಯಾಟರಿಗಳನ್ನು ಭಾರತದಲ್ಲೇ ರೂಪಿಸಿ, ವಿನ್ಯಾಸಗೊಳಿಸಿ, ಉತ್ಪಾದಿಸಲಾಗುತ್ತಿದೆ. ಇವುಗಳನ್ನು ವಿದೇಶದ ಸೇನೆಗಳಿಗೆ ಪೂರೈಸುವುದು ಭಾರತದ ರಕ್ಷಣಾ ಉತ್ಪಾದನೆ ಹಾಗೂ ರಫ್ತಿಗೆ ಸಂಬಂಧಿಸಿದಂತೆ ದೊಡ್ಡ ಸಾಧನೆಯಾಗಿದೆ. ಕೆಲ ವರ್ಷಗಳ ಹಿಂದೆ ಇಂತಹ ಬೆಳವಣಿಗೆಯನ್ನು ಊಹಿಸಲೂ ಸಾಧ್ಯವಿರಲಿಲ್ಲ ಎಂದು ಪ್ರವೇಗ್‌ ಕಂಪನಿ ಹೇಳಿಕೊಂಡಿದೆ.
 
ಪ್ರವೇಗ್‌ನ ಪ್ರಸಿದ್ಧ ಫೀಲ್ಡ್‌ ಪ್ಯಾಕ್‌ ಎಂಬ ಬ್ಯಾಟರಿಗಳು 60 ಮ್ಯಾಕ್‌ಬುಕ್‌ಗಳನ್ನು ಚಾಜ್‌ರ್‍ ಮಾಡುವಷ್ಟುವಿದ್ಯುತ್ತನ್ನು ಶೇಖರಿಸಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿವೆ. ಇವು ಹಗುರವಾದ ವಾಟರ್‌ಪ್ರೂಫ್‌ ಬ್ಯಾಟರಿಗಳಾಗಿದ್ದು, ಸೇನಾಪಡೆಗಳಲ್ಲಿ ಬಹಳ ಪ್ರಯೋಜನಕ್ಕೆ ಬರಲಿವೆ ಎಂದು ಹೇಳಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ