ಜನನ ಪ್ರಮಾಣ ಗಣನೀಯವಾಗಿ ಇಳಿಮುಖ

ಗುರುವಾರ, 15 ಡಿಸೆಂಬರ್ 2022 (13:26 IST)
ಟೋಕಿಯೋ : ಜಪಾನ್ನಲ್ಲಿ ಜನನ ಪ್ರಮಾಣ ಗಣನೀಯವಾಗಿ ಇಳಿಮುಖ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಅಲ್ಲಿನ ಆರೋಗ್ಯ, ಕಾರ್ಮಿಕ ಮತ್ತು ಕಲ್ಯಾಣ ಸಚಿವಾಲಯವು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದು,
 
ಈ ನಿಟ್ಟಿನಲ್ಲಿ ಜನರು ಮಗುವನ್ನು  ಮಾಡಿಕೊಂಡರೆ ಈಗಾಗಲೇ ನೀಡುತ್ತಿರುವ ಹಣಕ್ಕಿಂತಲೂ 48 ಸಾವಿರ ರೂ. ಅಧಿಕ ನೀಡುವುದಾಗಿ ತಿಳಿಸಿದೆ.

ಈಗಾಗಲೇ ಮಗುವಿನ ಜನನದ ನಂತರ ಹೊಸ ಪೋಷಕರಿಗೆ ಹೆರಿಗೆ ಮತ್ತು ಶಿಶುಪಾಲನೆಗಾಗಿ ಒಟ್ಟು 420,000 ಯೆನ್ಗಳ (2,52,338 ರೂ.) ಅನುದಾನವನ್ನು ನೀಡುತ್ತಿದೆ.

ಇದೀಗ ಆರೋಗ್ಯ, ಕಾರ್ಮಿಕ ಮತ್ತು ಕಲ್ಯಾಣ ಸಚಿವ ಕ್ಯಾಟೊ ಕಟ್ಸುನೋಬು ಮಗು ಜನನದ ನಂತರ ನೀಡಲಾಗುವ ಹಣವನ್ನು ಹೆಚ್ಚಿಸಲು ನಿರ್ಧರಿಸಿದ್ದು, ಆ ಸಂಖ್ಯೆಯನ್ನು 5,00,000 ಯೆನ್ಗೆ (3,00,402 ರೂ.) ಹೆಚ್ಚಿಸುವುದಾಗಿ ತಿಳಿಸಿದ್ದಾರೆ.

ಈಗಾಗಲೇ ಈ ಬಗ್ಗೆ ಅವರು ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಅವರೊಂದಿಗೆ ಯೋಜನೆಯನ್ನು ಚರ್ಚಿಸಿದ್ದಾರೆ. ಸರ್ಕಾರ 2023ರ ಆರ್ಥಿಕ ವರ್ಷಕ್ಕೆ ಅಂಗೀಕರಿಸುವ ಸಾಧ್ಯತೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ