Brazil air crash: ಬ್ರೆಜಿಲ್ ವಿಮಾನ ದುರಂತದಿಂದ ಈ ವ್ಯಕ್ತಿ ಅದೃಷ್ಟವಶಾತ್ ಪಾರಾಗಿದ್ದೇ ರೋಚಕ ಕತೆ
ಆಂಡ್ರಿಯಾನೊ ಅಸಿಸ್ ಎಂಬ ವ್ಯಕ್ತಿ ಕೂಡಾ ಈ ವಿಮಾನ ದುರಂತದಲ್ಲಿ ಈಗ ಪರಲೋಕ ಸೇರಬೇಕಿತ್ತು. ಆದರೆ ಆತನ ಅದೃಷ್ಟ ಚೆನ್ನಾಗಿತ್ತು. ಈ ವಿಮಾನದಲ್ಲಿ ಪ್ರಯಾಣಿಸಲಾಗಲಿಲ್ಲ. ಅಸಿಸ್ ಈ ವಿಮಾನದಲ್ಲಿ ತೆರಳಲು ವಿಮಾನ ನಿಲ್ದಾಣಕ್ಕೆ ಬಂದಿದ್ದ. ಆದರೆ ಬೋರ್ಡಿಂಗ್ ಪಾಸ್ ಇಲ್ಲದ ಕಾರಣ ಆತನನ್ನು ವಿಮಾನ ನಿಲ್ದಾಣದ ಅಧಿಕಾರಿಗಳು ವಿಮಾನವೇರಲು ಅವಕಾಶ ಕೊಡಲೇ ಇಲ್ಲ.
ನಾನು ನಿಲ್ದಾಣಕ್ಕೆ ಬಂದಾಗ ಬೋರ್ಡಿಂಗ್ ಪಾಸ್ ನೀಡುವ ಕೌಂಟರ್ ನಲ್ಲಿ ಯಾರೂ ಇರಲಿಲ್ಲ. ಹೀಗಾಗಿ ಬೋರ್ಡಿಂಗ್ ಪಾಸ್ ಕೊಳ್ಳಲು ಆಗಿರಲಿಲ್ಲ. ಹೀಗಾಗಿ ನಾನು ವಿಮಾನ ನಿಲ್ದಾಣದ ಅಧಿಕಾರಿಯೊಂದಿಗೆ ವಾಗ್ವಾದಕ್ಕಿಳಿದಿದ್ದೆ. ಆದರೆ ಏನೇ ಮಾಡಿದರೂ ಆತ ನನ್ನನ್ನು ವಿಮಾನ ಹತ್ತಲು ಬಿಡಲೇ ಇಲ್ಲ. ಬಹುಶಃ ಆ ವ್ಯಕ್ತಿಯಿಂದಲೇ ಇಂದು ನನ್ನ ಜೀವ ಉಳಿಯಿತು ಎಂದು ಅಸಿಸ್ ಕಣ್ಣೀರು ಹಾಕುತ್ತಲೇ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಒಂದು ವೇಳೆ ಆತ ಜಗಳ ಮಾಡಿದಾಗ ವಿಮಾನ ನಿಲ್ದಾಣದ ಅಧಿಕಾರಿಗಳು ವಿಮಾನವೇರಲು ಅವಕಾಶ ನೀಡಿದ್ದರೆ ಆತ ಇಂದು ಬದುಕುಳಿಯುತ್ತಿರಲಿಲ್ಲ. ಆದರೆ ಆಗುವುದೆಲ್ಲಾ ಒಳ್ಳೆಯದಕ್ಕೆ ಎನ್ನುತ್ತಾರಲ್ಲ. ಈತನ ಕತೆಯೂ ಹೀಗೆಯೇ ಆಗಿದೆ.