ಬಾಂಗ್ಲಾದೇಶ ಹಿಂಸಾಚಾರದಲ್ಲಿ ಕಾಣಿಸಿಕೊಂಡ ವಿರಾಟ್ ಕೊಹ್ಲಿ: ಏನಿದರ ನಿಜಾಂಶ (Video)

Krishnaveni K

ಬುಧವಾರ, 7 ಆಗಸ್ಟ್ 2024 (09:59 IST)
ಢಾಕಾ: ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆ ನಡುವೆ ಭಾರತದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಕಾಣಿಸಿಕೊಂಡಿದ್ದಾರೆ! ಅದು ಹೇಗೆ ಅಂತೀರಾ? ಇಲ್ಲಿದೆ ಅಸಲಿಯತ್ತು.

ಮಾಜಿ ಸೈನಿಕರ ಕುಟುಂಬಕ್ಕೆ ಮೀಸಲಾತಿ ವಿರೋಧಿಸಿ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾರೂಪ ತಾಳಿದೆ. ಪ್ರಧಾನಿ ಶೇಖ್ ಹಸೀನಾ ಈಗಾಗಲೇ ತಮ್ಮ ಹುದ್ದೆಗೆ ರಾಜೀನಾಮೆಯಿತ್ತು ಭಾರತಕ್ಕೆ ಪಲಾಯನಗೈದಿದ್ದಾರೆ. ರಸ್ತೆ ರಸ್ತೆಯಲ್ಲಿ ಜನ ಪ್ರತಿಭಟನೆಗಿಳಿದಿದ್ದಾರೆ.

ಈ ನಡುವೆ ಪ್ರತಿಭಟನಾಕಾರರ ನಡುವೆ ಥೇಟ್ ವಿರಾಟ್ ಕೊಹ್ಲಿಯಂತೆ ಕಾಣುವ ವ್ಯಕ್ತಿಯೊಬ್ಬ ಕಾಣಿಸಿಕೊಂಡಿದ್ದಾನೆ. ವಿರಾಟ್ ಕೊಹ್ಲಿಯ ತದ್ರೂಪಾಗಿರುವ ವ್ಯಕ್ತಿಯನ್ನು ಹೊತ್ತುಕೊಂಡು ಜನರು ಜೋರಾಗಿ ಘೋಷಣೆ ಕೂಗುತ್ತಾ ಪ್ರತಿಭಟನೆ ನಡೆಸಿದ್ದಾರೆ. ಅರೆಕ್ಷಣ ಕೊಹ್ಲಿಯನ್ನೇ ನೋಡಿದಂತಾಗಿ ನೆಟ್ಟಿಗರು ಅವಾಕ್ಕಾಗಿದ್ದಾರೆ.

ಆದರೆ ವಿರಾಟ್ ಕೊಹ್ಲಿ ಸದ್ಯಕ್ಕೆ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗಾಗಿ ಲಂಕಾದಲ್ಲಿದ್ದಾರೆ. ಇಂದು ಅವರು ಮೂರನೇ ಏಕದಿನ ಪಂದ್ಯವನ್ನಾಡಲಿದ್ದಾರೆ. ವಿರಾಟ್ ಕೊಹ್ಲಿ ಜನಪ್ರಿಯ ಕ್ರಿಕೆಟಿಗ. ಹೀಗಾಗಿ ಆತನ ತದ್ರೂಪಿಯನ್ನು ಬಾಂಗ್ಲಾ ಜನರು ಪ್ರತಿಭಟನೆಗಾಗಿ ಬಳಸಿಕೊಂಡಿದ್ದಾರೆ.

????King Kohli joins the victory celebration at the streets of Chattogram, #Bangladesh pic.twitter.com/zxl5opkbEq

— Zeyy (@zeyroxxie) August 5, 2024

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ