ಗಲ್ವಾನ್ ಘರ್ಷಣೆಯಲ್ಲಿ ತನ್ನ ಸೈನಿಕರ ಸಾವನ್ನು ಕೊನೆಗೂ ಒಪ್ಪಿಕೊಂಡ ಚೀನಾ

ಶುಕ್ರವಾರ, 19 ಫೆಬ್ರವರಿ 2021 (10:33 IST)
ಬೀಜಿಂಗ್: ಭಾರತ ಸೇನೆಯೊಂದಿಗೆ ಕಳೆದ ವರ್ಷ ಜೂನ್ ನಲ್ಲಿ ಗಲ್ವಾನ್ ಪ್ರದೇಶದಲ್ಲಿ ನಡೆದ ಘರ್ಷಣೆಯಲ್ಲಿ ತನ್ನ ಸೈನಿಕರು ಸಾವನ್ನಪ್ಪಿದ್ದು ನಿಜ ಎಂದು ಕೊನೆಗೂ ಒಪ್ಪಿಕೊಂಡಿದೆ.


ಇದುವರೆಗೆ ತನ್ನ ಸೈನಿಕರ ಸಾವಿನ ವಿಚಾರವನ್ನು ಮುಚ್ಚಿಟ್ಟಿದ್ದ ಚೀನಾ ಕೊನೆಗೂ ಸತ್ಯ ಒಪ್ಪಿಕೊಂಡಿದೆ. ಚೀನಾ ಸರ್ಕಾರಿ ಮಾಧ್ಯಮ ಗ್ಲೋಬಲ್ ಟೈಮ್ಸ್ 4 ಸೈನಿಕರು ಸಾವನ್ನಪ್ಪಿದ್ದಾಗಿ ಹೇಳಿಕೊಂಡಿದೆ. ಭಾರತದ ವಿರುದ್ಧದ ಘರ್ಷಣೆಯಲ್ಲಿ ಪ್ರಾಣತ್ಯಾಗ ಮಾಡಿದ ಐವರು ಪಿಎಲ್ ಎ ಸೈನಿಕರನ್ನು ಯಾವತ್ತೂ ಸ್ಮರಿಸಿಕೊಳ್ಳುತ್ತದೆ ಎಂದು ಬರೆದುಕೊಂಡಿದೆ. ಈ ಮೂಲಕ ಇದೇ ಮೊದಲ ಬಾರಿಗೆ ಚೀನಾ ತನ್ನ ಸೈನಿಕರು ಸಾವವನ್ನಪ್ಪಿದ್ದನ್ನು ಜಗತ್ತಿನ ಮುಂದೆ ಒಪ್ಪಿಕೊಂಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ