ಟಾಪ್ ಲೆಸ್ ಪೋಸ್ ಗೆ ಗಣೇಶನ ಪೆಂಡೆಂಟ್ ಮಾಲೆ! ಮತ್ತೆ ವಿವಾದದಲ್ಲಿ ಪಾಪ್ ಗಾಯಕಿ ರಿಹಾನ್ನಾ

ಬುಧವಾರ, 17 ಫೆಬ್ರವರಿ 2021 (09:21 IST)
ಮುಂಬೈ: ಇತ್ತೀಚೆಗಷ್ಟೇ ರೈತ ಪ್ರತಿಭಟನೆ ಬಗ್ಗೆ ಟ್ವೀಟ್ ಮಾಡಿ ಭಾರತದ ಆಂತರಿಕ ವಿಚಾರದಲ್ಲಿ ಮೂಗು ತೂರಿಸಿದ್ದಕ್ಕೆ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದ ಪಾಪ್ ಗಾಯಕಿ ರಿಹಾನ್ನಾ ಮತ್ತೆ ವಿವಾದಕ್ಕೀಡಾಗಿದ್ದಾರೆ.


ತನ್ನ ಸಾಮಾಜಿಕ ಜಾಲತಾಣಧಲ್ಲಿ ಹಿಂದೂಗಳ ಆರಾಧ‍್ಯ ದೈವ ಗಣಪತಿ ದೇವರ ಪೆಂಡೆಂಟ್ ಇರುವ ಮಾಲೆ ಧರಿಸಿ ಅರೆನಗ್ನ ಪೋಸ್ ಕೊಟ್ಟಿದ್ದಕ್ಕೆ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದಾಳೆ. ಟಾಪ್ ಲೆಸ್ ಪೋಸ್ ಕೊಡುವಾಗ ಗಣೇಶನ ಪೆಂಡೆಂಟ್ ಧರಿಸಿ ಅವಮಾನ ಮಾಡಿದ್ದು ಎಲ್ಲರ ಟೀಕೆಗೆ ಗುರಿಯಾಗಿದೆ. ನಿಜವಾಗಿಯೂ ನೀವು ಹಿಂದೂಗಳನ್ನು ಗೌರವಿಸುವುದಾದರೆ ಗಣೇಶನ ಪೆಂಡೆಂಟ್ ಧರಿಸಿ ಅವಮಾನ ಮಾಡಿರುವುದೇಕೆ ಎಂದು ಹಲವರು ಕಿಡಿ ಕಾರಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ