ನವದೆಹಲಿ: ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಪ್ರಧಾನಿ ಮೋದಿ ನೆರೆಯ ರಾಷ್ಟ್ರಗಳಿಗೆ ಎಚ್ಚರಿಕೆ ನೀಡಿದ ಬೆನ್ನಲ್ಲೇ ಗಡಿ ತಂಟೆ ಮಾಡುತ್ತಿರುವ ಚೀನಾ ಸ್ನೇಹ ಹಸ್ತ ಚಾಚಲು ಮುಂದಾಗಿದೆ.
ಪ್ರಧಾನಿ ಮೋದಿ ಭಾಷಣಕ್ಕೆ ಪ್ರತಿಕ್ರಿಯೆ ನೀಡಿರುವ ಚೀನಾ ವಿದೇಶಾಂಗ ಸಚಿವಾಲಯ ವಕ್ತಾರರು ಉಭಯ ದೇಶಗಳ ನಡುವಿನ ಜನರ ಹಿತಾಸಕ್ತಿ ಕಾಪಾಡುವ ಉದ್ದೇಶದಿಂದ ಶಾಂತಿ, ಸೌಹಾರ್ದ ಮಾತುಕತೆಗೆ ನಾವು ಸಿದ್ಧ ಎಂದಿದ್ದಾರೆ. ಇಷ್ಟು ದಿನ ಕಿರಿಕ್ ಮಾತನಾಡುತ್ತಿದ್ದ ಚೀನಾ ಈಗ ಮೋದಿ ನಮ್ಮನ್ನು ಕೆಣಕಲು ಬಂದವರಿಗೆ ತಕ್ಕ ಉತ್ತರ ಕೊಡುವ ಮಾತನಾಡಿದ ಕೂಡಲೇ ಕೊಂಚ ಮೃದು ಧೋರಣೆ ತಳೆದಿದೆ.