Dawood Ibrahim: ಪಾಕಿಸ್ತಾನದಲ್ಲಿರುವ ದಾವೂದ್ ಇಬ್ರಾಹಿಂಗೆ ಭಾರತವೆಂದರೆ ಎಷ್ಟು ಭಯ ನೋಡಿ

Krishnaveni K

ಶುಕ್ರವಾರ, 9 ಮೇ 2025 (15:10 IST)
Photo Credit: X
ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಅಡಗಿಕೊಂಡಿದ್ದ ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ಭಾರತವೆಂದರೆ ಎಷ್ಟು ಭಯ ಎಂಬುದಕ್ಕೆ ಇದುವೇ ಸಾಕ್ಷಿ.

ಆಪರೇಷನ್ ಸಿಂಧೂರ್ ಹೆಸರಿನಲ್ಲಿ ಭಾರತ ಪಾಕಿಸ್ತಾನದ ಮೇಲೆ ದಾಳಿ ಮಾಡುತ್ತಿದ್ದಂತೇ ಇತ್ತ ದಾವೂದ್ ಇಬ್ರಾಹಿಂ ದೇಶ ಬಿಟ್ಟು ಪರಾರಿಯಾಗಿದ್ದಾನೆ ಎಂಬ ಸುದ್ದಿ ಕೇಳಿಬಂದಿದೆ. ಪಾಕಿಸ್ತಾನದಲ್ಲಿ ಅಡಗಿ ಕೂತಿದ್ದ ದಾವೂದ್ ಈಗ ಪಾಕ್ ನಿಂದಲೇ ಎಸ್ಕೇಪ್ ಆಗಿದ್ದಾನಂತೆ.

ಭಾರತದಲ್ಲಿ ಹಲವು ಪ್ರಕರಣಗಳಲ್ಲಿ ಮೋಸ್ಟ್ ವಾಂಟೆಡ್ ಆಗಿರುವ ಪಾತಕಿ ಈಗ ವಿದೇಶಕ್ಕೆ ಪರಾರಿಯಾಗಿದ್ದಾನೆ ಎಂದು ವರದಿಯಾಗುತ್ತಿದೆ. ಈತ ಮುಂಬೈ ಸರಣಿ ಬಾಂಬ್ ಬ್ಲಾಸ್ಟ್ ನಲ್ಲಿ ಭಾರತಕ್ಕೆ ಮೋಸ್ಟ್ ವಾಂಟೆಡ್ ಪಾತಕಿಯಾಗಿದ್ದ.

ಆಪರೇಷನ್ ಸಿಂಧೂರ್ ಬೆನ್ನಲ್ಲೇ ಭಾರತ ಮತ್ತು ಪಾಕಿಸ್ತಾನ ನಡುವೆ ಕ್ಷಿಪಣಿ ದಾಳಿಯಾಗುತ್ತಿದೆ. ಭಾರತದ ಕ್ಷಿಪಣಿಗಳು ಲಾಹೋರ್, ಇಸ್ಲಾಮಾಬಾದ್, ಸಿಯಾಲ್ ಕೋಟ್, ಕರಾಚಿ ಸೇರಿದಂತೆ ಪಾಕಿಸ್ತಾನದ ಪ್ರಮುಖ ಸ್ಥಳಗಳನ್ನು ಛಿದ್ರಗೊಳಿಸಿದೆ. ಇದರಿಂದ ಬೆದರಿದ ದಾವೂದ್ ತಲೆಮರೆಸಿಕೊಂಡಿದ್ದಾನೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ