ಹನಿಮೂನ್ ಗೆ ತಾಯಿಯನ್ನು ಕರೆದುಕೊಂಡ ಹೋದ ಮಗಳಿಗೆ ಸಿಕ್ಕ ಉಡುಗೊರೆ ಏನು ಗೊತ್ತಾ?
ಸೋಮವಾರ, 20 ಜನವರಿ 2020 (05:58 IST)
ಲಂಡನ್ : ಮಗಳು ತನ್ನ ಹನಿಮೂನ್ ಗೆ ತಾಯಿಯನ್ನು ಕರೆದುಕೊಂಡ ಹೋದ ಪರಿಣಾಮ ಆಕೆಯ ತಾಯಿ ಮಗುವಿಗೆ ಜನ್ಮ ನೀಡಿದ ಘಟನೆ ಲಂಡನ್ ನಲ್ಲಿ ನಡೆದಿದೆ.
ಲಾರೆನ್ ಎಂಬ ಯುವತಿ ಪೌಲ್ ಎಂಬಾತನನ್ನು ಪ್ರೀತಿಸುತ್ತಿದ್ದು, ಮದುವೆಗೆ ಮೊದಲೇ ಮಗುವನ್ನು ಹೊಂದಿದ್ದಾರೆ, ಬಳಿಕ ಮದುವೆಯಾದ ಆಕೆ ತನ್ನ ಜೊತೆ ತನ್ನ ತಾಯಿಯನ್ನು ಕರೆದುಕೊಂಡು ಹನಿಮೂನ್ ಗೆ ಹೋಗಿದ್ದಾಳೆ. ಆದರೆ ಹನಿಮೂನ್ ನಲ್ಲಿ ಪತಿ ಆಕೆಯ ತಾಯಿ ಜೊತೆ ಕ್ಲೋಸ್ ಆಗಿದ್ದು ಪರಿಣಾಮ ತಾಯಿ 9ನೇ ತಿಂಗಳಿಗೆ ಪತಿಯ ಮಗುವಿಗೆ ಜನ್ಮ ನೀಡಿದ್ದಾಳೆ.
ಇದರಿಂದ ತಾಯಿ ಮತ್ತು ಪತಿಯ ಮೇಲೆ ಬೇಸರಗೊಂಡ ಲಾರೆನ್ ಬೇರೆ ಮದುವೆಯಾಗಿ ನಾಲ್ಕು ಮಕ್ಕಳ ತಾಯಿಯಾಗಿದ್ದಾರೆ. ಈ ಘಟನೆ 10 ವರ್ಷಗಳ ಹಿಂದೆ ನಡೆದಿದ್ದು, ಇದೀಗ ಲಾರೆನ್ ತಮ್ಮ ನೋವನ್ನು ಎಲ್ಲರ ಮುಂದಿಟ್ಟಿದ್ದಾರೆ.