ಶಾರ್ಟ್ಸ್​​ ಹಾಕಿದ್ದಕ್ಕೆ ಶಿಕ್ಷಕರು ಅವಮಾನ ಮಾಡಿದ್ದಾರೆಂದು ವಿದ್ಯಾರ್ಥಿನಿ ಮಾಡಿದ್ದೇನು ಗೊತ್ತಾ?

ಶುಕ್ರವಾರ, 26 ಜುಲೈ 2019 (07:58 IST)
ನ್ಯೂಯಾರ್ಕ್ : ಡ್ರೆಸ್ ವಿಚಾರಕ್ಕೆ ಅವಮಾನ ಮಾಡಿದ ಶಿಕ್ಷಕರ ವಿರುದ್ಧ ವಿದ್ಯಾರ್ಥಿನಿಯೊಬ್ಬಳು ಡ್ರೆಸ್ ಬಿಚ್ಚಿ ನಿಂತು ಪ್ರತಿಭಟನೆ ಮಾಡಿದ ಘಟನೆ ನ್ಯೂಯಾರ್ಕ್ ​ನಲ್ಲಿ ನಡೆದಿದೆ.
ಲೆಟಿಟಿಯಾ ಚಾಯ್ ಈ ರೀತಿ ಪ್ರತಿಭಟನೆ ಮಾಡಿದ ವಿದ್ಯಾರ್ಥಿನಿ. ನ್ಯೂಯಾರ್ಕ್ ​ನ ಇಥಾಕಾದಲ್ಲಿರುವ ಕಾರ್ನೆಲ್​ ವಿಶ್ವವಿದ್ಯಾಲಯದಲ್ಲಿ ಪ್ರಬಂಧ ಮಂಡನೆ ಸ್ಪರ್ಧೆ ಏರ್ಪಡಿಸಲಾಗಿತ್ತು. ಅಲ್ಲಿ ಓದುತ್ತಿರುವ ಚಾಯ್ ಈ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದಳು. ಆದರೆ ಸ್ಪರ್ಧೆಗೆ ಆಕೆ ಶಾರ್ಟ್ಸ್​​ ಹಾಕಿ ಬಂದಿದ್ದರಿಂದ ಶಿಕ್ಷಕರು ಕೋಪಗೊಂಡು ಎಲ್ಲರ ಎದುರು ಗದರಿ ಚಾಯ್​ಗೆ ಅವಮಾನ ಮಾಡಿದ್ದಾರೆ.


ಇದರಿಂದ ರೊಚ್ಚಿಗೆದ್ದ ಚಾಯ್ ವೇದಿಕೆಯ ಮೇಲೆ ಬಟ್ಟೆಯನ್ನು ತೆಗೆದು ಹಾಕಿ ಒಳ ಉಡುಪಿನಲ್ಲೇ ಪ್ರಬಂಧ ಮಂಡನೆ ಮಾಡಿದ್ದಾಳೆ. ಅಲ್ಲದೇ ‘ನನ್ನ ಉಡುಗೆಯ ಬಗ್ಗೆ ಮಾತನಾಡುವ ಹಕ್ಕು ಯಾರಿಗೂ ಇಲ್ಲ' ಎಂದು ಫೇಸ್​ಬುಕ್​ನಲ್ಲಿ ಬರೆದುಕೊಂಡಿದ್ದಾಳೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ