ಕೊನೆಗೂ ಮಾರಕ ರೋಗ ಏಡ್ಸ್ ಗೆ ಔಷಧಿ ಕಂಡುಹಿಡಿದ ವಿಜ್ಞಾನಿಗಳು

ಶನಿವಾರ, 6 ಜುಲೈ 2019 (10:38 IST)
ನ್ಯೂಯಾರ್ಕ್ : ಮನುಷ್ಯ ಕುಲಕ್ಕೆ ಮಾರಕವಾಗಿದ್ದ ಎಚ್.ಐ.ವಿ ವೈರಾಣುವನ್ನು ಸಂಪೂರ್ಣವಾಗಿ ನಾಶಗೊಳಿಸುವ ಔಷಧವನ್ನು ಕಂಡುಹಿಡಿಯುವಲ್ಲಿ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ.




ನೆಬ್ರಾಸ್ಕಾ ವಿಶ್ವವಿದ್ಯಾಲಯದ ಸಂಶೋಧಕರು 'ಲೇಸರ್‌ ಎಆರ್‌ಟಿ' ಎಂಬ ಔಷಧವನ್ನು ಐದು ವರ್ಷಗಳ ಸಂಶೋಧನೆಯಿಂದ ಅಭಿವೃದ್ಧಿಪಡಿಸಿ ಅದನ್ನು  ಇಲಿಗಳ ಮೇಲೆ ಪ್ರಯೋಗ ಮಾಡಿದ್ದಾರೆ. ಇದೀಗ ಪ್ರಯೋಗಾಲಯದಲ್ಲಿನ ಇಲಿಯ ದೇಹದಿಂದ ಎಚ್‌ಐವಿ ವೈರಾಣುವನ್ನು ಸಂಪೂರ್ಣವಾಗಿ ನಾಶವಾಗಿದ್ದು, ರಕ್ತ ಮಾದರಿಗಳ ಪರೀಕ್ಷೆಯಲ್ಲಿ ಈ ವಿಚಾರ ತಿಳಿದುಬಂದಿದೆ.


ಈ ಬಗ್ಗೆ ಸಂತಸ ವ್ಯಕ್ತಪಡಿಸಿದ ನೆಬ್ರಾಸ್ಕಾ ವಿಶ್ವವಿದ್ಯಾಲಯದ ಸಂಶೋಧಕ ಡಾ. ಹೊವಾರ್ಡ್‌ ಜೆಂಡಲ್‌ಮೆನ್‌, ಈ ಔಷಧಿಯಿಂದ  ವೈರಾಣುವನ್ನು ಸಂಪೂರ್ಣವಾಗಿ ನಾಶಪಡಿಸಬಹುದಾಗಿದೆ ಇದರಿಂದ ವಿಶ್ವದ ಸುಮಾರು 3.7 ಕೋಟಿ ಎಚ್‌ ಐವಿ ಪೀಡಿತರು ನಿಟ್ಟುಸಿರು ಬಿಡಬಹುದಾಗಿದೆ. ಈ ಸಂಶೋಧನೆಯಿಂದ ಭಾರಿ ದೊಡ್ಡ ಆವಿಷ್ಕಾರವಾಗಿದೆ ಎಂದು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ