ಕಾರ್ ಪೂಲಿಂಗ್ ಲೇನ್ ಮೂಲಕ ಹೋಗಲು ಕಾರಿನ ಚಾಲಕ ಮಾಡಿದ್ದೇನು ಗೊತ್ತಾ?

ಬುಧವಾರ, 29 ಜನವರಿ 2020 (06:51 IST)
ಅರಿಝೋನಾ: ಸಾಮಾನ್ಯವಾಗಿ ಟ್ರಾಫಿಕ್ ಸಿಗ್ನಲ್ ಗಳನ್ನು ತಪ್ಪಿಸಿಕೊಳ್ಳಲು ಕೆಲವರು ಶಾರ್ಟ್ ಕಟ್ ರೂಟ್ ಗಳನ್ನು ಹುಡುಕುತ್ತಾರೆ. ಅಥವಾ ವಾಹನವನ್ನು ವೇಗವಾಗಿ ಓಡಿಸುವುದರ ಮೂಲಕ ಸಿಗ್ನಲ್ ನಿಂದ ಪಾಸಾಗುತ್ತಾರೆ ಇಲ್ಲ ನಿಯಮ ಉಲ್ಲಂಘಿಸಿ ಸಿಕ್ಕಿ ಬೀಳುತ್ತಾರೆ.


ಆದರೆ ಇಲ್ಲೊಬ್ಬ 62 ವರ್ಷದ ಚಾಲಕ ಒಬ್ಬ ಅಥವಾ ಹೆಚ್ಚಿನ ಪ್ರಯಾಣಿಕರಿರುವ ಕಾರುಗಳಿಗೆ ಹೋಗಲು ಇರುವ ಕಾರ್ ಪೂಲಿಂಗ್ ಲೇನ್ ಮೂಲಕ ಹೋಗಲು ಕಾರಿನಲ್ಲಿ ಅಸ್ಥಿಪಂಜರವನ್ನು ಇಟ್ಟು ಅದಕ್ಕೆ ಟೋಪಿ ಹಾಕಿ ಹಗ್ಗದಿಂದ ಕಟ್ಟಿ ಒಬ್ಬ ವ್ಯಕ್ತಿಯ ಹಾಗೇ ಕಾಣುವಂತೆ ಮಾಡಿದ್ದಾನೆ.


ಆದರೆ ಇದನ್ನು ಕಂಡಡಿಹಿಡಿದ ಪೊಲೀಸರು ಆತನನ್ನು ಹಿಡಿದು ದಂಡ ವಿಧಿಸಿದ್ದಾರೆ. ಹಾಗೇ ಈ ಘಟನೆಯನ್ನು ಅರಿಝೋನ್ ಸಾರ್ವಜನಿಕ ಸುರಕ್ಷತೆ ವಿಭಾಗದ ಟ್ವೀಟರ್ ನಲ್ಲಿ ಶೇರ್ ಮಾಡಿದ್ದು, ಇದು ಈಗ ವೈರಲ್ ಆಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ