ಇದನ್ನು ಬಳಸದೆ ಲೈಂಗಿಕ ಕ್ರಿಯೆ ನಡೆಸಿದ ವೈದ್ಯ ಅರೆಸ್ಟ್

ಸೋಮವಾರ, 20 ಜನವರಿ 2020 (06:46 IST)
ಲಂಡನ್ : ಕಾಂಡೋಮ್ ಬಳಸದೆ ಲೈಂಗಿಕ ಕ್ರಿಯೆ ನಡೆಸಿದ್ದಕ್ಕೆ ವೈದ್ಯನೊಬ್ಬನ ವಿರುದ್ಧ ಯುವತಿ ದೂರು ದಾಖಲಿಸಿದ್ದ ಹಿನ್ನಲೆಯಲ್ಲಿ ಆತ ಈಗ ಪೊಲೀಸರ ಅತಿಥಿಯಾದ ಘಟನೆ ಲಂಡನ್ ನಲ್ಲಿ ನಡೆದಿದೆ.



ಮ್ಯಾಥ್ಯೂ ಸೆವೆಲ್ ಈ ಕೃತ್ಯ ಎಸಗಿದ ಆರೋಪಿ. ಈತ 23 ವರ್ಷದ ಯುವತಿಯನ್ನು ಡೇಟಿಂಗ್ ಆಪ್ ನಲ್ಲಿ ಭೇಟಿಮಾಡಿ, ತನಗೆ 36 ವರ್ಷ ವಯಸ್ಸಾಗಿದ್ದರು ಇನ್ನು 27 ಎಂದು ಸುಳ್ಳು ಹೇಳಿದ್ದಲ್ಲದೇ, ಯುವತಿಯನ್ನು ತನ್ನ  ಮನೆಗೆ ಕರೆದು ಲೈಂಗಿಕ ಕ್ರಿಯೆಗೆ ಒಪ್ಪಿಸಿ ಆ ವೇಳೆ ಕಾಂಡೋಮ್ ಬಳಸದೆ ಲೈಂಗಿಕ ಕ್ರಿಯೆ ನಡೆಸಿದ್ದಾನೆ.


ಈ ವಿಚಾರ ತಿಳಿದ ಯುವತಿ ಆತನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು, ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು  ಅತ್ಯಾಚಾರ ಆರೋಪದ ಮೇರೆಗೆ ಆತನನ್ನು ಬಂಧಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ