Donald Trump: ಭಾರತ ಪಾಕಿಸ್ತಾನ ಯುದ್ಧ ನಿಲ್ಲಿಸಿದ್ದು ನಾನವನಲ್ಲ ಎಂದ ಟ್ರಂಪ್

Krishnaveni K

ಶುಕ್ರವಾರ, 16 ಮೇ 2025 (09:38 IST)
ನವದೆಹಲಿ: ಮೊನ್ನೆಯಷ್ಟೇ ಭಾರತ ಮತ್ತು ಪಾಕಿಸ್ತಾನ ನಡುವೆ ಕದನ ವಿರಾಮ ಘೋಷಿಸಲು ಒಪ್ಪಿಸಿದ್ದೇನೆ ಎಂದು ಹೇಳಿಕೊಂಡು ತಿರುಗಿದ್ದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗ ಯು ಟರ್ನ್ ಹೊಡೆದಿದ್ದು ನಾನವನಲ್ಲ ಎನ್ನುತ್ತಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ನಡುವೆ ಸಂಘರ್ಷ ತಾರಕಕ್ಕೇರಿದ್ದಾಗ ಟ್ರಂಪ್ ಮಧ್ಯಪ್ರವೇಶಿಸಿ ಕದನ ವಿರಾಮ ಘೋಷಿಸಲು ಮನ ಒಲಿಸಿದ್ದೇನೆ ಎಂದಿದ್ದರು. ಇದು ಭಾರೀ ಚರ್ಚೆಗೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಈಗ ಟ್ರಂಪ್ ಯೂ ಟರ್ನ್ ಹೊಡೆದಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ಕದನ ವಿರಾಮ ನಡೆಸಲು ತನ್ನದೇ ಮಧ್ಯಸ್ಥಿಕೆ ಎಂದಿದ್ದ ಟ್ರಂಪ್ ಈಗ ನಾನು ನೇರ ಮಧ್ಯಸ್ಥಿಕೆ ವಹಿಸಿಲ್ಲ. ಬದಲಾಗಿ ಪರಸ್ಪರ ಶಾಂತಿ ಕಾಪಾಡಲು ಸಹಾಯ ಮಾಡಿದ್ದೆನಷ್ಟೇ ಎಂದಿದ್ದರು.

ಭಾರತ ಮತ್ತು ಪಾಕಿಸ್ತಾನ ನಡುವೆ ಕದನ ವಿರಾಮ ಘೋಷಣೆಯಾಗಿದೆ ಎಂದು ಭಾರತಕ್ಕಿಂತಲೂ ಮೊದಲೇ ಘೋಷಣೆ ಮಾಡಿದ್ದವರು ಟ್ರಂಪ್. ಈಗ ತಮ್ಮ ವರಸೆಯನ್ನೇ ಬದಲಿಸಿದ್ದಾರೆ. ಯುದ್ಧ ಬೇಡ ವ್ಯಾಪಾರ ಮಾಡೋಣ ಎಂದಿದ್ದಕ್ಕೆ ಇಬ್ಬರೂ ಒಪ್ಪಿದರು ಎನ್ನುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ