ಇಂಗ್ಲೆಂಡ್ನಲ್ಲಿ ತುರ್ತು ಪರಿಸ್ಥಿತಿ ಘೋಷಣೆ

ಬುಧವಾರ, 6 ಸೆಪ್ಟಂಬರ್ 2023 (09:46 IST)
ಲಂಡನ್ : ಇಂಗ್ಲೆಂಡ್ನ ಎರಡನೇ ಅತಿ ದೊಡ್ಡ ನಗರ ಬರ್ಮಿಂಗ್ಹ್ಯಾಮ್ ಆರ್ಥಿಕ ತುರ್ತು ಪರಿಸ್ಥಿತಿ ಘೋಷಿಸಿಕೊಂಡಿದೆ. 1988ರ ಸ್ಥಳೀಯ ಸರ್ಕಾರದ ಹಣಕಾಸು ಕಾಯಿದೆ ಅಡಿಯಲ್ಲಿ ಸೆಕ್ಷನ್ 114 ಸೂಚನೆಯನ್ನು ನೀಡಲಾಗಿದೆ. ಇದು ಅಗತ್ಯ ಸೇವೆಗಳನ್ನು ಹೊರತುಪಡಿಸಿ ಎಲ್ಲಾ ವೆಚ್ಚವನ್ನು ನಿರ್ಬಂಧಿಸುತ್ತದೆ.
 
ಅಗತ್ಯ ಸೇವೆಗಳಿಗೆ ಸರ್ಕಾರದ ನಿಧಿ ಕಡಿತದಿಂದ, ಹೆಚ್ಚುತ್ತಿರುವ ಇಂಧನ ದರ ಮತ್ತು ವೇತನ ಬೇಡಿಕೆಗಳು ಸಹ ಇನ್ನಷ್ಟು ಆರ್ಥಿಕ ಸಂಕಷ್ಟಕ್ಕೆ ಕಾರಣವಾಗಿದೆ. ಇದೇ ರೀತಿಯಾಗಿ ದಕ್ಷಿಣ ಲಂಡನ್ನಲ್ಲಿರುವ ಕ್ರೊಯ್ಡಾನ್ ಕೌನ್ಸಿಲ್ ಸಹ ಕಳೆದ ವರ್ಷ ನವೆಂಬರ್ನಲ್ಲಿ ಹಾಗೂ ಲಂಡನ್ನ ಪೂರ್ವದ ಎಸೆಕ್ಸ್ನಲ್ಲಿರುವ ಥುರಾಕ್ ಕೌನ್ಸಿಲ್ ಡಿಸೆಂಬರ್ನಲ್ಲಿ ತುರ್ತು ಪರಿಸ್ಥಿತಿ ಘೋಷಿಸಿಕೊಂಡಿದ್ದವು.

ಕೌನ್ಸಿಲರ್ಗಳು ಸೆಕ್ಷನ್ 114 ಸೂಚನೆಯನ್ನು ನೀಡಿದ 21 ದಿನಗಳೊಳಗೆ ಸಭೆ ಸೇರಬೇಕು. ಅಲ್ಲದೇ ಖರ್ಚು ಕಡಿಮೆ ಮಾಡಲು ಅಗತ್ಯವಾದ ಬಜೆಟ್ನ್ನು ಮಂಡಿಸಬೇಕು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ