ಕ್ರೀಡಾ ಸ್ಪೂರ್ತಿ ಮರೆತ ಆಸ್ಟ್ರೇಲಿಯಾ: ಆಶಸ್ ಟೆಸ್ಟ್ ನಲ್ಲಿ ವಿವಾದಾತ್ಮಕ ರನೌಟ್

ಸೋಮವಾರ, 3 ಜುಲೈ 2023 (09:20 IST)
ಲಾರ್ಡ್ಸ್: ಆಶಸ್ ಟೆಸ್ಟ್ ಕ್ರಿಕೆಟ್ ನಲ್ಲಿ ಇಂಗ್ಲೆಂಡ್ ಬ್ಯಾಟಿಗ ಜಾನಿ ಬೇರ್ ಸ್ಟೋರನ್ನು ಆಸ್ಟ್ರೇಲಿಯಾ ರನೌಟ್ ಮಾಡಿದ ರೀತಿ ವಿವಾದಕ್ಕೆ ಕಾರಣವಾಗಿದೆ.

10 ರನ್ ಗಳಿಸಿ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದ ಜಾನಿ ಬೇರ್ ಸ್ಟೋ ಆಸೀಸ್ ವೇಗಿ ಕ್ಯಾಮರೂನ್ ಗ್ರೀನ್ ಎಸೆದ ಎಸೆತವನ್ನು ಹೊಡೆಯಲಾಗದೇ ಬಾಲ್ ವಿಕೆಟ್ ಕೀಪರ್ ಕೈ ಸೇರಿತು. ಡಾಟ್ ಬಾಲ್ ಆಗಿದ್ದರಿಂದ ಕ್ರೀಸ್ ಗೆ ಕಾಲು ತಾಗಿಸಿ ಬೇರ್ ಸ್ಟೋ ಕ್ರೀಸ್ ಬಿಟ್ಟು ಸಹಾ ಬ್ಯಾಟಿಗನ ಬಳಿ ಸಾಗಿದರು.

ಈ ವೇಳೆ ಆಸೀಸ್ ಕೀಪರ್ ಅಲೆಕ್ಸ್ ಕ್ಯಾರಿ ಅನಿರೀಕ್ಷಿತವಾಗಿ ಚೆಂಡನ್ನು ವಿಕೆಟ್ ಗೆ ಎಸೆದು ರನೌಟ್ ಮಾಡಿ ಸಂಭ್ರಮಿಸಿದರು. ಇದರ ಅರಿವಿಲ್ಲದೇ ಬೇರ್ ಸ್ಟೋ ಅಚ್ಚರಿಯಿಂದ ನೋಡುತ್ತಲೇ ಇದ್ದರು. ನಿಯಮದ ಪ್ರಕಾರ ಔಟ್ ಆಗಿದ್ದರೂ ಆಸೀಸ್ ಕ್ರೀಡಾ ಸ್ಪೂರ್ತಿ ಮರೆತು ನಡೆದುಕೊಂಡಿತು ಎಂದು ಟೀಕೆಗೆ ಗುರಿಯಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ