ಕೊರೋನಾ ಲಸಿಕೆ ಪಡೆದ ಪ್ರಯಾಣಿಕರಿಗೆ ನಿರ್ಬಂಧ ಸಡಿಲಿಸಿದ ಇಂಗ್ಲೆಂಡ್

ಶನಿವಾರ, 18 ಸೆಪ್ಟಂಬರ್ 2021 (07:54 IST)
ಲಂಡನ್ ; ಕೊರೋನಾ ಮೂರನೇ ಅಲೆ  ಹಿನ್ನೆಲೆಯಲ್ಲಿ ಇಂಗ್ಲೆಂಡ್ ಸರ್ಕಾರ ಭಾರತ ಸೇರಿದಂತೆ ಅನೇಕ ರಾಷ್ಟ್ರಗಳನ್ನು ಕೆಂಪು ಪಟ್ಟಿಗೆ ಸೇರಿಸಿ, ಪ್ರಯಾಣಿಕರು ಇಂಗ್ಲೆಂಡ್ಗೆ ಆಗಮಿಸುವುದು ಮತ್ತು ಇಂಗ್ಲೆಂಡ್ನಿಂದ ತೆರಳುವುದನ್ನು ನಿರ್ಬಂಧಿಸಿತ್ತು. ಆದರೆ, ಇದೀಗ ಇಂಗ್ಲೆಂಡ್ ಸರ್ಕಾರವು ಇಂಗ್ಲೆಂಡಿಗೆ ಪ್ರಯಾಣದ ಮೇಲಿನ ನಿರ್ಬಂಧಗಳನ್ನು ಸಡಿಲಿಸಿದೆ.

ಎರಡು ಡೋಸ್ ಲಸಿಕೆ  ಪಡೆದವರಿಗೆ ಅಂತಾರಾಷ್ಟ್ರೀಯ ಪ್ರಯಾಣ ನಿಯಮಗಳ ಪ್ರಮುಖ ಸಡಿಲಿಕೆಯನ್ನು ಶುಕ್ರವಾರ ಘೋಷಿಸಿದೆ. ಈ ಘೋಷಣೆಯಿಂದಾಗಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ದೀರ್ಘ-ಮಾರ್ಗದ ಪ್ರಯಾಣಿಕರಿಗೆ ಇದು ಪ್ರಯೋಜನವಾಗಲಿದೆ.
ಕೋವಿಡ್ -19  ಅಪಾಯದ ಮಟ್ಟವನ್ನು ಆಧರಿಸಿ ಇಂಗ್ಲೆಂಡ್ ಸರ್ಕಾರ ಅಕ್ಟೋಬರ್ 4 ರಿಂದ ನಿರ್ಬಂಧ ಸಡಿಲಿಕೆ ಮಾಡುವ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ. ಅಕ್ಟೋಬರ್ 4 ರಿಂದ ಪ್ರಯಾಣಿಕರು ಇನ್ನು ಮುಂದೆ ವಿದೇಶದಿಂದ ಇಂಗ್ಲೆಂಡಿಗೆ ಪ್ರಯಾಣಿಸಲು ಪಿಸಿಆರ್ ಪರೀಕ್ಷೆಗಳನ್ನು ತೆಗೆದುಕೊಳ್ಳುವ ಅಗತ್ಯವಿಲ್ಲ ಎಂದು ಯುಕೆ ಸಾರಿಗೆ ಕಾರ್ಯದರ್ಶಿ ಗ್ರಾಂಟ್ ಶಾಪ್ಸ್ ಹೇಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ