ಭಾರತ ಮೂಲದ ಯುವತಿಯನ್ನು ಮಾಜಿ ಪ್ರಿಯಕರನೊಬ್ಬ ಜೀವಂತ ಸಮಾಧಿ ಮಾಡಿರುವ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ.
ಆಕೆ ನರ್ಸಿಂಗ್ ವಿದ್ಯಾರ್ಥಿಯಾಗಿದ್ದಳು, 2021ರ ಮಾರ್ಚ್ನಲ್ಲಿ ಈ ಘಟನೆ ನಡೆದಿದೆ, ಆತ 21 ವರ್ಷದ ಜಾಸ್ಮಿನ್ ಕೌರ್ ಎಂಬಾಕೆಯನ್ನು ಹತ್ಯೆ ಮಾಡಿದ್ದಾನೆ. ತಾರಿಕ್ಜೋತ್ ಸಿಂಗ್ ಎಂಬಾತ ಜಾಸ್ಮಿನ್ಳನ್ನು ಪ್ರೀತಿಸುತ್ತಿದ್ದ ಆದರೆ ಆಕೆ ಪ್ರೀತಿಯನ್ನು ನಿರಾಕರಿಸಿದ್ದಳು, ಆಕೆಯ ಮೇಲೆ ಸೇಡು ತೀರಿಸಿಕೊಳ್ಳಲು ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.
ಜಾಸ್ಮಿನ್ ಕೌರ್ ಕೆಲಸ ಮಾಡುತ್ತಿದ್ದ ಸ್ಥಳದಿಂದ ಆಕೆಯನ್ನು ಅಪಹರಿಸಿದ್ದರು, ಅಲ್ಲಿಂದ 644 ಕಿ.ಮೀ ದೂರ ಕರೆದೊಯ್ದು ಜೀವಂತ ಸಮಾಧಿ ಮಾಡಿದ್ದರು. ಕೋರ್ಟ್ನಲ್ಲಿ ಶಿಕ್ಷೆ ಪ್ರಕಟವಾಗುವ ಸಮಯದಲ್ಲಿ ಈ ಮಾಹಿತಿಯನ್ನು ಎಲ್ಲರಿಗೂ ನೀಡಲಾಯಿತು, ಜಾಸ್ಮಿನ್ ಅವರ ಕೊಲೆಗೆ ತಾರಿಕ್ಜೋತ್ ಸಂಚು ರೂಪಿಸಿದ್ದ, ಕೌರ್ ಅವರ ಹತ್ಯೆ ನಿಜಕ್ಕೂ ಕ್ರೂರವಾಗಿತ್ತು.
ತಾರಿಕ್ಜೋತ್ ಈ ಮೊದಲು ತಾನು ಕೊಲೆ ಮಾಡಿಲ್ಲ, ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಹೇಳಿದ್ದ, ಬಳಿಕ ತಪ್ಪೊಪ್ಪಿಕೊಂಡು ಆಕೆಯನ್ನು ಹೂತು ಹಾಕಿರುವುದಾಗಿ ತಿಳಿಸಿದ್ದ, ಬಳಿಕ ಸಮಾಧಿ ಸ್ಥಳಕ್ಕೆ ತೆರಳಿದಾಗ ಜಾಸ್ಮಿನ್ಳ ಶೂಗಳು, ಕನ್ನಡಕ, ಬ್ಯಾಡ್ಜ್ ಎಲ್ಲವೂ ಸಿಕ್ಕಿತ್ತು. ಆಕೆಯ ಕೈಕಾಲು ಕಟ್ಟಿ, ಕತ್ತು ಸೀಳಿ, ಆಕೆಯನ್ನು ಹೂತು ಹಾಕಲಾಗಿತ್ತು. ಜಾಸ್ಮಿನ್ ತಂದೆ-ತಾಯಿಗಾದ ನೋವು ಜೀವನ ಪರ್ಯಂತ ಹಾಗೆಯೇ ಉಳಿಯುತ್ತದೆ.