ಫೋರ್ಬ್ಸ್ ವಿಶ್ವದ ಶ್ರೀಮಂತರ ಪಟ್ಟಿ ಬಿಡುಗಡೆ; ಅಗ್ರಸ್ಥಾನದಲ್ಲಿ ಮುಖೇಶ್ ಅಂಬಾನಿ
ಗುರುವಾರ, 8 ಮಾರ್ಚ್ 2018 (11:09 IST)
ನ್ಯೂಯಾರ್ಕ್: ವಿಶ್ವದ ಜನ ಪ್ರಿಯ ನಿಯತಕಾಲಿಕೆ ಫೋರ್ಬ್ಸ್ ವಿಶ್ವದ ಸಿರಿವಂತರ ಪಟ್ಟಿ ಪ್ರಕಟಿಸಿದ್ದು, ಮತ್ತೊಮ್ಮೆ ಭಾರತೀಯ ಉದ್ಯಮಿ ಮುಖೇಶ್ ಅಂಬಾನಿ ಅಗ್ರಸ್ಥಾನ ಪಡೆದುಕೊಂಡಿದ್ದಾರೆ. ಈ ಮೂಲಕ, ಸತತ 11ನೇ ವರ್ಷ ಈ ಪಟ್ಟಿಯಲ್ಲಿ ಅಗ್ರರಾಗಿ ಮುಂದು ವರಿದಿರುವ ಹೆಗ್ಗಳಿಕೆ ಅವರದ್ದಾಗಿದೆ.
ಇನ್ನು ಅಮೆಜಾನ್‌ನ ಸಂಸ್ಥಾಪಕ ಜೆಫ್ ಬಿಜೋಸ್ ಪ್ರತಿಷ್ಠಿತ ಫೋರ್ಬ್ಸ್ ಮ್ಯಾಗಜಿನ್ ನ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದು, ಎರಡನೇ ಸ್ಥಾನದಲ್ಲಿ ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಇದ್ದಾರೆ.
ಅಮೆಜಾನ್.ಕಾಮ್‌ನಲ್ಲಿ ಬೆಜೋಸ್‌ಗೆ 80 ದಶಲಕ್ಷ ಷೇರ್‌ಗಳಿವೆ. ಕಳೆದ 30 ವರ್ಷಗಳಿಂದ ಬೆಜೋಸ್ ಜಗತ್ತಿನ ಅತ್ಯಂತ ಶ್ರೀಮಂತರಲ್ಲಿ ಆರನೆಯವರಾಗಿ ಸ್ಥಾನಪಡೆದಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ