ಫ್ರಾನ್ಸ್‌ನಲ್ಲಿ ಹಿಜಾಬ್‌ಗೆ ದಂಡ!

ಶನಿವಾರ, 5 ಫೆಬ್ರವರಿ 2022 (13:53 IST)
ಭಾರತದಲ್ಲಿ ಮಾತ್ರ ಅಲ್ಲ ಜಗತ್ತಿನ ಬೇರೆ ಬೇರೆ ದೇಶಗಳಲ್ಲೂ ಇಂಥದ್ದೇ ವಿವಾದಗಳು ಆಗಾಗ ಮುನ್ನೆಲೆಗೆ ಬಂದಿದ್ದವು.
 
ಇಂಥ ಸಂದರ್ಭದಲ್ಲಿ ಬಹುತೇಕ ದೇಶಗಳಲ್ಲಿ ಹಿಜಾಬ್‌ ಅಥವಾ ಸ್ಕಾಫ್‌ರ್‍ ಧರಿಸಿ ಶಾಲೆಗೆ ಪ್ರವೇಶ ಇಲ್ಲ ಎಂದೇ ಕಾನೂನು ರೂಪಿಸಲಾಗಿದೆ.

ಪಶ್ಚಿಮ ಯುರೋಪ್‌ ದೇಶಗಳಲ್ಲಿಯೇ ಮೊಟ್ಟಮೊದಲ ಬಾರಿಗೆ 2010ರಲ್ಲಿ ಫ್ರಾನ್ಸ್‌ ಇಸ್ಲಾಮಿಕ್‌ ದುಪಟ್ಟಾ ಅಥವಾ ಹಿಜಾಬ್‌ ಧರಿಸುವುದನ್ನು ನಿಷೇಧಿಸಿದೆ.

ಸಾರ್ವಜನಿಕ ಪ್ರದೇಶ, ಸರ್ಕಾರಿ ಕಚೇರಿಗಳಲ್ಲಿ ಬುರ್ಖಾವನ್ನೂ ನಿಷೇಧಿಸಿದೆ. ಹಿಜಾಬ್‌ ಧರಿಸುವ ಮಹಿಳೆಯರು ಧಾರ್ಮಿಕ ಸಮುದಾಯವನ್ನು ಪ್ರತಿಬಿಂಬಿಸುತ್ತಾರೆ.

ಇದು ಫ್ರೆಂಚ್‌ ಗಣರಾಜ್ಯದ ಏಕತೆ ಮತ್ತು ಜಾತ್ಯತೀತ ತತ್ವಕ್ಕೆ ವಿರೋಧಿ. ಹಾಗಾಗಿ ಶಾಲೆಗಳಲ್ಲಿ ಹಿಜಾಬ್‌ ಧರಿಸುವುದು ಈ ಜಾತ್ಯತೀತ, ಸಮಾನತೆಯ ತತ್ವವನ್ನು ತಲೆಕೆಳಗು ಮಾಡುತ್ತದೆ ಎಂದು ಅದು ಭಾವಿಸುತ್ತದೆ ಎಂದು ಫ್ರಾನ್ಸ್‌ನ ಕಾಯ್ದೆ ಹೇಳುತ್ತದೆ.

ಅಲ್ಲದೆ ಈ ಕಾನೂನು ಉಲ್ಲಂಘಿಸುವ ಮಹಿಳೆಯರಿಗೆ 150 ಯುರೋ ದಂಡ ವಿಧಿಸಲಾಗುತ್ತದೆ. ತಮ್ಮ ಪತ್ನಿಯರಿಗೆ ಬುರ್ಖಾ ಅಥವಾ ಹಿಜಾಬ್‌ ಧರಿಸುವಂತೆ ಬಲವಂತ ಮಾಡುವ ಪುರುಷರಿಗೂ ಒಂದು ವರ್ಷ ಜೈಲು ಶಿಕ್ಷೆ ಮತ್ತು 30,000 ಯುರೋ ದಂಡ ವಿಧಿಸುವ ಕಾನೂನು ಫ್ರಾನ್ಸ್‌ನಲ್ಲಿ ಜಾರಿಯಲ್ಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ