ಸಿರಿಯಾ ಸರ್ವಾಧಿಕಾರಿಯ ಕಿತ್ತೊಗೆಯಲು ಮೂಲ ಕಾರಣವಾಗಿದ್ದು 14 ವರ್ಷದ ಯುವಕ, ಹೇಗೆ ಇಲ್ಲಿದೆ ವಿವರ

Krishnaveni K

ಸೋಮವಾರ, 9 ಡಿಸೆಂಬರ್ 2024 (10:12 IST)
Photo Credit: X
ಡಮಾಸ್ಕಸ್: ಸಿರಿಯಾದಲ್ಲಿ ಬಂಡುಕೋರರು ನಡೆಸಿದ ಸುದೀರ್ಘ ಹೋರಾಟಕ್ಕೆ ಜಯ ಸಿಕ್ಕಿದೆ. ಸರ್ವಾಧಿಕಾರಿ ಬಷರ್ ಅಸಾದ್ ದೇಶ ಬಿಟ್ಟು ಪಲಾಯನ ಮಾಡಿದ್ದು ಡಮಾಸ್ಕಸ್ ಬಂಡುಕೋರರ  ವಶವಾಗಿದೆ.

ಕಳೆದ 12 ವರ್ಷಗಳಿಂದ ಬಷದ್ ಅಸಾದ್ ಸರ್ವಾಧಿಕಾರ ವಿರೋಧಿಸಿ ಮೂಲಭೂತವಾದಿ ಹಯಾತ್ ತಹ್ರೀರ್ ಅಲ್-ಶಾಮ್ ಸಂಘಟನೆ ನೇತೃತ್ವದಲ್ಲಿ ಆಂತರಿಕ ಯುದ್ಧ ನಡೆಸುತ್ತಲೇ ಇತ್ತು. ಸಿರಿಯಾದ ಒಂದೊಂದೇ ನಗರಗಳನ್ನು ವಶಪಡಿಸಿಕೊಳ್ಳುತ್ತಾ ಬಂದ ಬಂಡುಕೋರರು ಇದೀಗ ಡಮಾಸ್ಕಸ್ ನ್ನು ವಶಪಡಿಸಿ ಸಿರಿಯಾವನ್ನು ಸರ್ವಾಧಿಕಾರಿ ಆಡಳಿತದಿಂದ ಮುಕ್ತಿಗೊಳಿಸಿದ್ದಾರೆ.

ಈ ಮೂಲಕ ಅಸಾದ್ ಮತ್ತು ಅವರ ತಂದೆ ಸೇರಿದಂತೆ 54 ವರ್ಷದ ಸರ್ವಾಧಿಕಾರದ ಆಡಳಿತಕ್ಕೆ ತೆರೆ ಬಿದ್ದಿದೆ. ಅಸಾದ್ ತಂದೆ ಅತ್ಯಂತ ಕ್ರೂರ ಆಡಳಿತಗಾರನಾಗಿದ್ದರು. ಅವರ ಬಳಿಕ ಬಂದ ಅಸಾದ್ ಮೊದಲು ಕೊಂಚ ಸುಧಾರಣಾವಾಧಿಯಂತೆ ಇದ್ದರೂ ಬಳಿಕ ಅವರೂ ತಂದೆಯ ಹಾದಿ ಹಿಡಿದರು. ತಮ್ಮ ಆಡಳಿತವನ್ನು ಪ್ರಶ್ನಿಸಿದವರನ್ನು ಮುಲಾಜಿಲ್ಲದೇ ಕತ್ತಲ ಕೋಣೆಯಲ್ಲಿಟ್ಟು ಥಳಿಸಿ ಕೊನೆಗೆ ನೇಣಿಗೆ ಹಾಕುತ್ತಿದ್ದರು. ಇದೇ ರೀತಿ ಸುಮಾರು 1 ಲಕ್ಷಕ್ಕೂ ಅಧಿಕ ಮಂದಿಯನ್ನು ಅಸಾದ್ ನೇಣುಗಂಬಕ್ಕೇರಿಸಿದ್ದಾನೆ ಎನ್ನಲಾಗಿದೆ.

ಈ ಸರ್ವಾಧಿಕಾರದ  ವಿರುದ್ಧ ದಂಗೆಯೇಳಲು ಮೂಲ ಕಾರಣವಾಗಿದ್ದು 14 ವರ್ಷದ ಮೊಯಿನ್ ಸ್ಯಾಸ್ನೇಹ್ ಎಂಬ ಬಾಲಕ. ಸರ್ವಾಧಿಕಾರೀ ಆಡಳಿತದಿಂದ ಬೇಸತ್ತಿದ್ದ ಆತ ಗೋಡೆಯ ಮೇಲೆ ನಿಮ್ಮ ಸಮಯ ಬಂದಿದೆ ಡಾಕ್ಟರ್ ಎಂದು ನೇತ್ರ ತಜ್ಞನಾಗಿರುವ ಅಸಾದ್ ಕುರಿತು ಬರೆದಿದ್ದ.

ಇದರಿಂದ ರೊಚ್ಚಿಗೆದ್ದ ಅಸಾದ್ ಮೊಯಿನ್ ಮತ್ತು ಸ್ನೇಹಿತರನ್ನು 26 ದಿನಗಳ ಬಂಧಿಸಿ ಚಿತ್ರಹಿಂಸೆ ನೀಡಿತ್ತು. ಇದುವೇ ದಂಗೆಗೆ ಮೂಲ ಕಾರಣವಾಯಿತು 2011 ರ ಮಾರ್ಚ್ ನಲ್ಲಿ ಆರಂಭವಾದ ದಂಗೆ ಇಂದು ಕೊನೆಯಾಗಿದ್ದು, ಸಿರಿಯಾ ಈಗ ಬಂಡುಕೋರರ ವಶವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ