ಹಸಿವೆಯನ್ನು ತಾಳದೇ ಹೋಟೆಲ್‌ ಮುಂದೆ ಹೆಲಿಕಾಪ್ಟರ್‌ ಇಳಿಸಿದ ಪೈಲಟ್

ಸೋಮವಾರ, 15 ಮೇ 2017 (14:31 IST)
ನಿಮ್ಮ ಹಸಿವಿನ ತಾಪವನ್ನು ತೃಪ್ತಿಪಡಿಸಲು ನೀವು ಎಷ್ಟು ಸಿದ್ಧರಿದ್ದೀರಿ? ನಿಮ್ಮ ಮನಸ್ಸಿನಲ್ಲಿ ಏನೇ ಇರಲಿ, ಇಂತಹ ಪೈಲಟ್‌ನ ಅಸಾಧಾರಣ ಸಾಹಸ ಅಚ್ಚರಿ ಮೂಡಿಸಿದೆ.
 
ಸಿಡ್ನಿಯ ಮೆಕ್ಡೊನಾಲ್ಡ್ ಹೋಟೆಲ್ ಸಮೀಪದಲ್ಲಿರುವ ನಿವಾಸಿಗಳು ಶನಿವಾರದಂದು ಫಾಸ್ಟ್ ಫುಡ್ ಜಾಯಿಂಟ್‌ ಮುಂದೆ ಹೆಲಿಕಾಪ್ಟರ್ ಬಂದಿಳಿದಾಗ ದಿಗ್ಭ್ರಮೆಗೊಂಡರು. ಹೋಟೆಲ್ ಮುಂದೆ ನಿಂತಿದ್ದ ಕಾರು ದ್ವಿಚಕ್ರವಾಹನಗಳ ಸವಾರರಿಗೆ ಅಚ್ಚರಿಯೋ ಅಚ್ಚರಿ. ಕಾರು, ದ್ವಿಚಕ್ರವಾಹನಗಳಂತೆ ಹೆಲಿಕಾಪ್ಟರ್ ಕೂಡಾ ಪಕ್ಕದಲ್ಲಿ ಬಂದು ನಿಂತಿತು. 
 
ಹೋಟೆಲ್ ಮುಂದೆ ನಿಲ್ಲಿಸಿದ ಹೆಲಿಕಾಪ್ಟರ್‌ನ ರೆಕ್ಕೆಗಳು ತಿರುಗುತ್ತಿದ್ದರೂ ಅದರಿಂದಿಳಿದ ಪೈಲಟ್, ರೆಸ್ಟುರಾಂಟ್‌ನೊಳಗೆ ನುಗ್ಗಿ ಫಾಸ್ಟ್‌ಫುಡ್ ಆಹಾರದ ಬ್ಯಾಗ್‌ನೊಂದಿಗೆ ಬಂದು ಹೆಲಿಕಾಪ್ಟರ್ ಏರಿ ಮಾಯವಾಗಿದ್ದಾನೆ. 
 
ವಿಲಕ್ಷಣ ಘಟನೆಯನ್ನು ವೀಕ್ಷಕರು ಕ್ಯಾಮರಾದಲ್ಲಿ ಹಿಡಿದಿದ್ದರು ಮತ್ತು ಅದಕ್ಕೆ ತಾವೇ ಸಾಕ್ಷಿಯಾಗಿದ್ದನ್ನು ನಂಬಲು ಸಾಧ್ಯವಾಗಲಿಲ್ಲ. "ಓಹ್ ನಿಜವೇ? ನಾನು ತುರ್ತುಪರಿಸ್ಥಿತಿಯೆಂದು ಭಾವಿಸಿದ್ದೇನೆ" ಎಂದು ಓರ್ವ ವೀಕ್ಷಕನು ಅಚ್ಚರಿ ವ್ಯಕ್ತಪಡಿಸಿದ್ದಾನೆ. 
 
ಹೆಲಿಕಾಪ್ಟರ್ ಅನ್ನು ಲ್ಯಾಂಡ್‌ ಮಾಡುವುದು ಕಾನೂನುಬಾಹಿರವಲ್ಲ. ಆದರೆ ಸಿವಿಲ್ ಏವಿಯೇಷನ್ ಸೇಫ್ಟಿ ಪ್ರಾಧಿಕಾರ ಈ ಘಟನೆಯನ್ನು ತನಿಖೆ ಮಾಡುತ್ತಿದೆ ಎಂದು ಆಸ್ಟ್ರೇಲಿಯಾದ ಮಾಧ್ಯಮಗಳು ವರದಿ ಮಾಡಿವೆ.
 
ಪೈಲಟ್ ಭೂಮಿ ಮಾಲೀಕರ ಅನುಮತಿಯನ್ನು ಹೊಂದಿದ್ದಲ್ಲಿ ಸುರಕ್ಷಿತವಾಗಿ ಎಲ್ಲಿ ಬೇಕಾದರೂ ಹೆಲಿಕಾಪ್ಟರ್ ಲ್ಯಾಂಡ್‌ ಮಾಡಬಹುದು ಎಂದು ಸಂಸ್ಥೆ ತಿಳಿಸಿದೆ.
 
 ಚಾಪರ್ ಪೈಲಟ್ ಎಂದು ಹೇಳಿಕೊಳ್ಳುವ ವ್ಯಕ್ತಿಯು ಸಿಡ್ನಿಯ ಸ್ಥಳೀಯ ರೇಡಿಯೋ ನೆಟ್‌ವರ್ಕ್‌ಗೆ ಮಾತನಾಡಿ, ಹೋಟೆಲ್ ಮುಂದೆ ಹೆಲಿಕಾಪ್ಟರ್ ಲ್ಯಾಂಡ್‌ ಮಾಡಲು ಮಾಲೀಕರ ಅನುಮತಿ ಪಡೆದಿದ್ದೇನೆ ಎಂದು ತಿಳಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 
ನಿಮ್ಮ ಹಸಿವಿನ ತಾಪವನ್ನು ತೃಪ್ತಿಪಡಿಸಲು ನೀವು ಎಷ್ಟು ಸಿದ್ಧರಿದ್ದೀರಿ? ನಿಮ್ಮ ಮನಸ್ಸಿನಲ್ಲಿ ಏನೇ ಇರಲಿ, ಇಂತಹ ಪೈಲಟ್‌ನ ಅಸಾಧಾರಣ ಸಾಹಸ ಅಚ್ಚರಿ ಮೂಡಿಸಿದೆ.

ವೆಬ್ದುನಿಯಾವನ್ನು ಓದಿ