Puneeth Kerehalli: ನಿನ್ನನ್ನೂ ಮುಗಿಸುತ್ತೇವೆ ಎಂದು ಪುನೀತ್ ಕೆರೆಹಳ್ಳಿಗೆ ಜೀವ ಬೆದರಿಕೆ
ಈ ಸಂಬಂಧ ಮೈಸೂರಿನ ಉದಯಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉದಯಗಿರಿ ನಿವಾಸಿ ಅಕ್ರಮ ಖಾನ್ ಎಂಬಾತನ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ವ್ಯಾಟ್ಸಪ್ ಕರೆ ಮಾಡಿ ಪುನೀತ್ ಕೆರೆಹಳ್ಳಿಗೆ ಬೆದರಿಕೆ ಹಾಕಲಾಗಿತ್ತು.
ಗೋ ಸಾಗಣಿಕೆ ವೇಳೆ ಇದ್ರಷ್ ಪಾಷಾ ಅನುಮಾಸ್ಪದವಾಗಿ ಸಾವನ್ನಪ್ಪಿದ್ದ. ಈ ಪ್ರಕರಣದಲ್ಲಿ ಪುನೀತ್ ಕೆರೆಹಳ್ಳಿ ಹೆಸರೂ ಕೇಳಿಬರುತ್ತಿದೆ. ಹೀಗಾಗಿ ಆತನ ಸಾವಿಗೆ ಪುನೀತ್ ಕೊಂದು ಪ್ರತೀಕಾರ ತೀರಿಸುವುದಾಗಿ ಬೆದರಿಕೆ ಹಾಕಲಾಗಿದೆ.
ಪ್ರಕರಣ ಸಂಬಂಧ ಅಂದೇ ಪುನೀತ್ ಕೆರೆಹಳ್ಳಿ ಸೇರಿದಂತೆ ಐವರನ್ನು ಬಂಧಿಸಲಾಗಿತ್ತು. ಆದರೆ 2023 ಮೇ ನಲ್ಲಿ ಎಲ್ಲಾ ಆರೋಪಿಗಳೂ ಜಾಮೀನಿನ ಮೇಲೆ ಹೊರಬಂದಿದ್ದರು. ಗೋ ಸಾಗಣಿಕೆ ಮಾಡುತ್ತಿದ್ದ ವಾಹನವನ್ನು ಹಿಂದೂ ಕಾರ್ಯಕರ್ತರು ತಡೆದಾಗ ಅದರಲ್ಲಿದ್ದವರು ಓಡಿ ಹೋಗಿದ್ದರು. ಇದ್ರಿಷ್ ಪಾಷಾ ಮೃತದೇಹ ಅಲ್ಲೇ 200 ಮೀ. ದೂರದಲ್ಲಿ ಪತ್ತೆಯಾಗಿತ್ತು.