ಚೀನಾ ವಿರುದ್ಧ ಭಾರತದ ಹೊಸ ಅಸ್ತ್ರ

ಶನಿವಾರ, 19 ಆಗಸ್ಟ್ 2017 (09:35 IST)
ನವದೆಹಲಿ: ಗಡಿಯಲ್ಲಿ ಸುಖಾಸುಮ್ಮನೆ ತಕರಾರು ತೆಗೆಯುತ್ತಿರುವ ಚೀನಾಗೆ ಭಾರತ ಹೊಸ ಅಸ್ತ್ರದ ಮೂಲಕ ತಿರುಗೇಟು ನೀಡಲು ಮುಂದಾಗಿದೆ.

 
ಅದು ಶಸ್ತ್ರ, ಸೈನಿಕರ ಹೊರತಾಗಿ ಏಟು ನೀಡುವ ತಂತ್ರಕ್ಕೆ ಮೊರೆ ಹೋಗಲಾಗಿದೆ. ಭಾರತ ತನ್ನ ವಿದ್ಯುತ್ ಮತ್ತು ಟೆಲಿಕಾಂ ಕ್ಷೇತ್ರದ ನಿಯಮಾಳಿಗಳನ್ನು ಬಿಗುಗೊಳಿಸಿದ್ದು, ಇದು ಚೀನಾಕ್ಕೆ ಸಂಕಷ್ಟ ತಂದೊಡ್ಡುವ ಸಾಧ್ಯತೆಯಿದೆ.

ಚೀನಾದ ಹಲವು ಟೆಲಿಕಾಂ ಮತ್ತು ವಿದ್ಯುತ್ ಪ್ರಸರಣ ಕಂಪನಿಗಳು ಭಾರತದಲ್ಲಿವೆ. ಇವು ಭಾರತದಲ್ಲಿ ವೈರಸ್ ದಾಳಿಗೆ ಮುಂದಾಗಬಹುದು ಎಂಬ ಆತಂಕದಲ್ಲಿ ಕೇಂದ್ರ ನಿಯಮ ಬಿಗುಗೊಳಿಸಲು ಮುಂದಾಗಿದೆ.

ಇದರ ಅನ್ವಯ ದೇಶದಲ್ಲಿ ವಿದ್ಯುತ್ ಪ್ರಸರಣ ಸಂಸ್ಥೆಗಳನ್ನು ಸ್ಥಾಪಿಸಲು ಬಯಸುವ ವಿದೇಶಿ ಕಂಪನಿಗಳಿಗೆ ಹೊಸ ಷರತ್ತುಗಳನ್ನು ವಿಧಿಸಲಾಗುವುದು. ಭಾರತದಲ್ಲಿ ಬಿಡ್ ಮಾಡುವ ಮೊದಲು ಚೀನಾದಲ್ಲಿ 10 ವರ್ಷ ಕೆಲಸ ಮಾಡಬೇಕು. ಸಂಸ್ಥೆಯ ಉನ್ನತ ಹುದ್ದೆಗಳಿಗೆ ಭಾರತೀಯರನ್ನೇ ನೇಮಕ ಮಾಡಬೇಕು ಎಂಬಿತ್ಯಾದಿ ಷರತ್ತುಗಳನ್ನು ವಿಧಿಸಲಾಗಿದೆ.

ಇದನ್ನೂ ಓದಿ.. ಇಂಗ್ಲಿಷ್ ನಲ್ಲಿ ಮಾತಾಡಲ್ಲ ಎಂದ ಸಿಎಂ ಸಿದ್ದರಾಮಯ್ಯ
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ