ವಾಷಿಂಗ್ಟನ್ : ವಿಶ್ವದಲ್ಲೇ ಅತಿ ದೊಡ್ಡ ಆನ್ಲೈನ್ ವೀಡಿಯೋ ಪ್ಲಾಟ್ಫಾರ್ಮ್ ಎನಿಸಿಕೊಂಡಿರುವ ಯೂಟ್ಯೂಬ್ಗೆ ಹೊಸ ಸಿಇಒ ಆಗಿ ಭಾರತ ಮೂಲದ ನೀಲ್ ಮೋಹನ್ ನೇಮಕಗೊಂಡಿದ್ದಾರೆ.
ಕಳೆದ 9 ವರ್ಷಗಳಿಂದ ಯೂಟ್ಯೂಬ್ ಸಿಇಒ ಆಗಿ ಕಾರ್ಯನಿರ್ವಹಿಸಿದ್ದ ಸುಸಾನ್ ವೊಜ್ಸಿಕಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದು, ಅವರ ಸ್ಥಾನವನ್ನು ಈಗ ನೀಲ್ ಮೋಹನ್ ವಹಿಸಿಕೊಳ್ಳಲಿದ್ದಾರೆ.
54 ವರ್ಷದ ಸುಸಾನ್ ತಮ್ಮ ಕುಟುಂಬ ಹಾಗೂ ವೈಯಕ್ತಿಕ ಜೀವನಕ್ಕೆ ಇದೀಗ ಹೆಚ್ಚಿನ ಆದ್ಯತೆ ನೀಡುವ ಸಲುವಾಗಿ ತಮ್ಮ ಸ್ಥಾನದಿಂದ ಕೆಳಗಿಳಿಯಲು ಮುಂದಾಗಿರುವುದಾಗಿ ತಿಳಿಸಿದ್ದಾರೆ.
ಭಾರತ ಮೂಲದ ನೀಲ್ ಮೋಹನ್ ಅವರು ಈ ಹಿಂದೆ ಯೂಟ್ಯೂಬ್ನ ಮುಖ್ಯ ಉತ್ಪನ್ನಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. 2008ರಲ್ಲಿ ಯೂಟ್ಯೂಬ್ನ ಮಾತೃ ಕಂಪನಿಯಾಗಿರುವ ಗೂಗಲ್ಗೆ ಸೇರಿದ ಅವರು 15 ವರ್ಷಗಳ ಕಾಲ ವೊಜ್ಸಿಕಿ ಅವರ ಯೋಜನೆಗಳಿಗೆ ಸಹಕರಿಸಿದ್ದಾರೆ. ಡಿಸ್ಪ್ಲೇ ಹಾಗೂ ವೀಡಿಯೋ ಜಾಹೀರಾತುಗಳ ಹಿರಿಯ ಉಪಾಧ್ಯಕ್ಷರಾಗಿದ್ದ ಅವರು 2015ರಲ್ಲಿ ಯೂಟ್ಯೂಬ್ನ ಮುಖ್ಯ ಉತ್ಪನ್ನಾಧಿಕಾರಿಯಾಗಿ ನೇಮಕಗೊಂಡರು.