ನವದೆಹಲಿ : ಪೂರ್ವ ಲಡಾಕ್ ನ ಗಾಲ್ವಾನ್ ಕಣಿವೆಯಲ್ಲಿ ಭಾರತೀಯ ಯೋಧರ ಮೇಲೆ ದಾಳಿ ಮಾಡಿದ ಚೀನಾಗೆ ಭಾರತೀಯ ಸೇನೆ ಪ್ರತ್ಯುತ್ತರ ನೀಡಿದೆ.
ಪೂರ್ವ ಲಡಾಕ್ ನ ಗಾಲ್ವಾನ್ ಕಣಿವೆಯಲ್ಲಿ ಭಾರತೀಯ ಸೇನೆಯ ಮೇಲೆ ಚೀನಾದ ಸೈನಿಕರು ಹಿಂಸಾತ್ಮಕ ದಾಳಿ ನಡೆಸಿದ್ದರು. ಈ ಸಂಘರ್ಷದಲ್ಲಿ 20 ಮಂದಿ ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಈ ದಾಳಿಗೆ ಪತ್ರತ್ಯುತ್ತರ ನೀಡಿದ ಭಾರತೀಯ ಸೇನೆ ಚೀನಾದ ಸೈನಿಕರ ಮೇಲೆ ದಾಳಿ ನಡೆಸಿ 43 ಮಂದಿ ಯೋಧರನ್ನು ಸದೆಬಡಿದಿದೆ. ಅಷ್ಟೇ ಅಲ್ಲದೇ 100ಕ್ಕೂ ಹೆಚ್ಚು ಚೀನಾ ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಅಲ್ಲದೇ ತನ್ನ ಯೋಧರ ಮೃತದೇಹಗಳನ್ನು ಹೊತ್ತೊಯ್ಯಲು ವೀನಾ ಹೆಲಿಕಾಪ್ಟರ್ ಗಳು ಎಲ್ ಎಸಿ ಬಳಿ ಹಾರಾಟ ನಡೆಸಿವೆ ಎಂಬುದಾಗಿ ತಿಳಿದುಬಂದಿದೆ.