10 ತಿಂಗಳು ನದಿಯಲ್ಲಿ ಮುಳುಗಿದ್ದ ಐಫೋನ್ ಮತ್ತೆ ಯಥಾ ಸ್ಥಿತಿಯಲ್ಲಿ ಸಿಕ್ಕಾಗ!
ಸೋಮವಾರ, 27 ಜೂನ್ 2022 (08:50 IST)
ನವದೆಹಲಿ: ಮೊಬೈಲ್ ಫೋನ್ ಒಮ್ಮೆ ನೀರಿಗೆ ಬಿದ್ದರೆ ಮುಗೀತು. ಅದು ಹಾಳಾಯಿತು ಎಂದೇ ಅರ್ಥ. ಆದರೆ ಇಲ್ಲೊಬ್ಬ ಅದೃಷ್ಟಶಾಲಿ 10 ತಿಂಗಳ ಹಿಂದೆ ನದಿಯಲ್ಲಿ ಕಳೆದುಕೊಂಡಿದ್ದ ಐಫೋನ್ ನ್ನು ಮತ್ತೆ ವರ್ಕಿಂಗ್ ಕಂಡೀಷನ್ ನಲ್ಲಿ ಮರಳಿ ಪಡೆದಿದ್ದಾನೆ!
ಬ್ರಿಟನ್ ನಲ್ಲಿ ಇಂತಹದ್ದೊಂದು ಘಟನೆ ನಡೆದಿದೆ. 10 ತಿಂಗಳ ಹಿಂದೆ ಒವಿಯಾನ್ ಡೇವಿಸ್ ಎಂಬಾತನ ಐ ಫೋನ್ ಬ್ಯಾಚುಲರ್ ಪಾರ್ಟಿ ವೇಳೆ ನದಿಗೆ ಬಿತ್ತು. ಈ ಫೋನ್ ಇನ್ನು ಸಿಗದು ಎಂದು ಡೇವಿಸ್ ಮನೆಗೆ ಮರಳಿ ತನ್ನದೇ ಸಹಜ ಜೀವನ ನಡೆಸುತ್ತಿದ್ದ.
ಆದರೆ ಆತನ ಅದೃಷ್ಟ ನೋಡಿ. ಆ ಫೋನ್ ಅದೇ ನದಿಯಲ್ಲಿ ದೋಣಿಯಾಟ ಮಾಡುತ್ತಿದ್ದ ಇನ್ನೊಬ್ಬಾತನ ಕೈಗೆ ಸಿಕ್ಕಿತು. ಆತನೂ ಆ ಫೋನ್ ಚಾಲೂ ಆಗುತ್ತಿದೆಯೇ ಎಂದು ನೋಡದೇ ಫೋನ್ ನ ಫೋಟೋವನ್ನು ಫೇಸ್ ಬುಕ್ ನಲ್ಲಿ ಪ್ರಕಟಿಸಿದ್ದ. ಈ ಫೋಟೋ ನೋಡಿದ ಡೇವಿಸ್ ಇದು ತನ್ನದೇ ಫೋನ್ ಎಂದು ಗುರುತು ಹಿಡಿದು ಫೋನ್ ಮರಳಿ ಪಡೆದಿದ್ದ. ಯಾತಕ್ಕೂ ಇರಲಿ, ಎಂದು ಮನೆಗೆ ಬಂದು ಫೋನ್ ಚಾರ್ಜ್ ಮಾಡಿ ನೋಡಿದರೆ ಚಾರ್ಜ್ ಆಗುತ್ತಿತ್ತು. ಮತ್ತು ಫೋನ್ ಚಾಲೂ ಕೂಡಾ ಆಗಿದೆ! ಇದನ್ನು ನೋಡಿ ಸ್ವತಃ ಡೇವಿಸ್ ಗೆ ಆಶ್ಚರ್ಯವಾಗಿದೆ!